'ಸಂಧ್ಯಾವಂದನೆ ಏಕಾಗ್ರತೆಗೆ ಸಹಕಾರಿ'
ಶೃಂಗೇರಿ: ಶಿಬಿರಾರ್ಥಿಗಳು ಶಿಬಿರಗಳಲ್ಲಿ ಪಡೆದುಕೊಂಡ ಉತ್ತಮ ಸಲಹೆ, ಮಾಹಿತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶ್ರೀನಿವಾಸಮೂರ್ತಿ ಹೆಬ್ಬಾರ್ ತಿಳಿಸಿದರು. ಅವರು ಪಟ್ಟಣದ ರಾಜಾನಗರ ವಿದ್ಯಾಭಾರತೀ ಸಭಾಭವನದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ತಾಲೂಕು ಯುವ ವಿಪ್ರ ವೇದಿಕೆ ಆಶ್ರಯದಲ್ಲಿ ಒಂದು ವಾರಗಳ ಕಾಲ ನಡೆದ ಸಂಧ್ಯಾವಂದನೆ ಕಲಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ವೇದ, ಮಹಾಕಾವ್ಯಗಳು, ಪುರಾಣಗಳ ಬಗ್ಗೆ ತಿಳಿಸಬೇಕು. ಅವರಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಸಂಧ್ಯಾವಂದನೆಯಿಂದ ಮನಸ್ಸಿನ ಏಕಾಗ್ರತೆ ಕಾಪಾಡಿಕೊಳ್ಳಬಹುದು ಎಂದರು. ವೆ.ಬ್ರ.ಶ್ರೀ ಶೇಷಗಿರಿ ಭಟ್, ಬಿ.ಎಲ್. ರವಿಕುಮಾರ್, ಜಿ.ಎಂ. ಸತೀಶ್ ಇದ್ದರು. ಶಿಬಿರಾರ್ಥಿಪರವಾಗಿ ಮೂತಳ್ಳಿ ಸುಬ್ರಮಣ್ಯ, ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಜನಾರ್ದನ ಮಂಡಗಾರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಗುರುಮೂರ್ತಿ ಸ್ವಾಗತಿಸಿ ಸುಂಕುರ್ಡಿ ನಂದಕುಮಾರ್ ನಿರೂಪಿಸಿದರು. ಹೆಬ್ಬಿಗೆ ಕೃಷ್ಣಮೂರ್ತಿ ವಂದಿಸಿದರು.