ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆಚ್ಚಿನ ಇಳುವರಿಗೆ ಬೆಳೆ ನಿರ್ವಹಣೆ ಅಗತ್ಯ

Mainashree
Updated On : 9 May 2014, 11:11 am

ಮೂಡಿಗೆರೆ: ಯಾವುದೇ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕಾದರೆ ಸಮಗ್ರ ಬೆಳೆ ನಿರ್ವಹಣೆ ಪದ್ಧತಿಗಳಾದ ಮಾಗಿ ಉಳುವೆ, ಸರಿಯಾದ ಪ್ರಮಾಣ ಗೊಬ್ಬರ ನೀಡುವುದು, ನೀರು ನಿರ್ವಹಣೆ, ಸೂಕ್ತ ಕೀಟ ಹಾಗೂ ಶಿಲೀಂಧ್ರನಾಶಕ ಬಳಸುವುದು ಮುಖ್ಯವಾಗಿರುತ್ತದೆ ಎಂದು ವಿಷಯ ತಜ್ಞ ಡಾ. ಗಿರೀಶ್ ಆರ್. ತಿಳಿಸಿದರು.
ತರೀಕೆರೆ ತಾಲೂಕು ಮಾಕನಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ ವತಿಯಿಂದ ಕೈಗೊಂಡಿದ್ದ ಮಾವು ಬೆಳೆಯ ಮೂಂಚೂಣಿ ಪ್ರಾತ್ಯಕ್ಷಿತೆಯ ಕೊನೆಯ ಭಾಗವಾಗಿ ಮಾವು ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡಿದ್ದ ಯುವ ರೈತ ರವಿಕುಮಾರ್ ತಮ್ಮ ಅನುಭವ ಹಂಚಿಕೊಂಡು ಮುಂಚೂಣಿ ಪ್ರತ್ಯಕ್ಷಿಕೆಯಲ್ಲಿ ಪರಿಚಯಿಸಿಕೊಟ್ಟಂತಹ ಮ್ಯಾಂಗೋ ಸ್ಪೆಷಲ್ ಲಘು ಪೋಷಕಾಂಶ ಬಳಕೆ  ಪರಿಣಾಮಕಾರಿಯಾಗಿದ್ದು, ಹಣ್ಣಿನ ಗಾತ್ರ, ಹೂವು ಹೆಚ್ಚು ಕಾಯಿ ಕಟ್ಟಿರುವುದು ಮತ್ತು ಹಣ್ಣಿನ ಬಣ್ಣ ಆಕರ್ಷಣೀಯವಾಗಿತ್ತು ಎಂದರು.
ಈ ಭಾಗದ ಎಲ್ಲಾ ಮಾವು ಬೆಳೆಗಾರರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡ ರೈತರು ತಿಳಿಸಿದರು.
ಕೇಂದ್ರದ ಸಹ ಸಂಶೋಧಕರಾದ ನಾಗರಾಜ ಗೋಕಾವಿ ಮತ್ತು ಗ್ರಾಮದ ರೈತ, ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement