ಎಸ್ಸೆಸ್ಸೆಲ್ಸಿ: ವಿವಿಧ ಶಾಲೆಗಳ ಸಾಧನೆ
ಚಿಕ್ಕಮಗಳೂರು: ತಾಲೂಕಿನ ವಸ್ತಾರೆಯಲ್ಲಿರುವ ಗೌತಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಕುಳಿತುಕೊಂಡಿದ್ದ 15 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರೆ, 9 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಬಿ.ಎಸ್. ಶ್ರೀಕಾಂತ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೂರ್ಣಪ್ರಜ್ಞಾ ಶಾಲೆ: ಆಲ್ದೂರಿನ ಪೂರ್ಣಪ್ರಜ್ಞಾ ವಿದ್ಯಾಕೇಂದ್ರ ಪ್ರೌಢಶಾಲೆಯ 23 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಪ್ರಸಕ್ತ ಸಾಲಿನ ಪ್ರಥಮ ಎಸ್ಸೆಸ್ಸೆಲ್ಸಿ ತಂಡ ಇದಾಗಿದ್ದು, 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 14 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ಪ್ರೇಕ್ಷಾ ಉಡುಪ 608 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆಂದು ಸಂಸ್ಥೆಯ ಸಹ ಕಾರ್ಯದರ್ಶಿ ರಾಜೀವ್ ತಿಳಿಸಿದ್ದಾರೆ.
ಬಿಪಿಬಿ ಸರ್ಕಾರಿ ಪ್ರೌಢಶಾಲೆ: ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನ ಬಿಪಿಬಿ ಸರ್ಕಾರಿ ಪ್ರೌಢಶಾಲೆ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಕುಳಿತ್ತಿದ್ದ 27 ವಿದ್ಯಾರ್ಥಿಗಳ ಪೈಕಿ ಪ್ರಥಮ ಶ್ರೇಣಿಯಲ್ಲಿ 7, ದ್ವಿತೀಯ ಶ್ರೇಣಿಯಲ್ಲಿ 11 ಹಾಗೂ ತೃತೀಯ ದರ್ಜೆಯಲ್ಲಿ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ಮಂಜುನಾಥ್ ತಿಳಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದಕ್ಕೆ ಶಾಲಾಭಿವೃದ್ಧಿ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಬಿಜಿಎಸ್: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಳೆಹೊನ್ನೂರಿನ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಒಟ್ಟು 26 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 8 ಅತ್ಯುನ್ನತ ಶ್ರೇಣಿ, 14 ಪ್ರಥಮ ದರ್ಜೆ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಎಸ್ಜೆಆರ್: ಸ್ಥಳೀಯ ಜಗದ್ಗುರು ರೇಣುಕಾಚಾರ್ಯ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 78 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 92 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಿರ್ಮಲಾ ಕಾನ್ವೆಂಟ್: ಸ್ಥಳೀಯ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 6 ಅತ್ಯುನ್ನತ ಶ್ರೇಣಿ, 34 ಪ್ರಥಮ ದರ್ಜೆ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇ.ಎಸ್. ಮಹೇಶ್ 569 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಜೆವಿಎಸ್: ಸಮೀಪದ ಕಡಬಗೆರೆ ಜ್ಯೋರ್ತಿವಿಕಾಸ್ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 29 ಪ್ರಥಮ ದರ್ಜೆ, 3 ದ್ವಿತೀಯ ದರ್ಜೆ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಜೆಸಿ, ದರ್ಶಿನಿ ಶಾಲೆಗೆ ಶೇ. 100
ಶೃಂಗೇರಿ: ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳು ಉತ್ತಮ ಫಲಿತಾಂಶ ಪಡೆದಿದ್ದು, ಪಟ್ಟಣದ ದರ್ಶಿನಿ ಹಾಗೂ ಜೆಸೀ ಪ್ರೌಢಶಾಲೆ ಶೇ 100 ಫಲಿತಾಂಶ ಗಳಿಸಿದೆ. ದರ್ಶಿನಿ ಪ್ರೌಢಶಾಲೆಯ 26 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆ, 54 ಪ್ರಥಮ ದರ್ಜೆ,12 ದ್ವಿತಿಯ ದರ್ಜೆ, 3 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಸುಮುಖ ವಿ.ಎಸ್ ಅತಿ ಹೆಚ್ಚು 616 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಾಧನೆ ಮಾಡಿದ್ದಾನೆ.
ಅನನ್ಯ ಟಿ.ಆರ್ (599),ರೋಹಿತ್ ಲಕ್ಷ್ಮಣ ಕೇರಿ (599) ಅಂಕಗಳಿಸಿ ತಾಲೂಕಿನಲ್ಲಿ ತೃತಿಯ ಸ್ಥಾನ ಗಳಿಸಿದ್ದಾರೆ. ಜೆಸಿ ಪ್ರೌಡಶಾಲೆಯಲ್ಲಿ 21 ವಿದ್ಯಾರ್ಥಿಗಳು ಅತ್ಯತ್ತಮ ದರ್ಜೆ, 33 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಮೋಘ 607 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶೇ. 77 ಫಲಿತಾಂಶ: ಮರ್ಕಲ್ ಪಂಚಾಯಿತಿ ಕಿಗ್ಗಾದ ಅಭಿನವ ರಮಾನಂದ ಪ್ರೌಢಶಾಲೆ ಶೇ. 77 ಫಲಿತಾಂಶ ಗಳಿಸಿದ್ದು, ಪೂಜಾ(569), ಸ್ಮಿತಾ (547) ಅತಿ ಹೆಚ್ಚು ಅಂಕಗಳಿಸಿದ್ದಾರೆ. ನೆಮ್ಮಾರು ಸರ್ಕಾರಿ ಪ್ರೌಢಶಾಲೆ ಶೇ. 64 ಪಡೆದಿದ್ದು, ಪ್ರಿಯಾ. ಜೆ.ಎ (580), ಪ್ರೇಕ್ಷಾ ಟಿ.ಆರ್ (535), ನಿಖಿತ ವೈ.ಎಸ್ (547),ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ ಶೇ. 74, ನಿಖಿಲ್ ಕೆ.ಜಿ (568), ರಮಾನಂದ ಎಚ್.ಎಂ (562), ಅವನಿ (545) ಅತಿ ಹೆಚ್ಚು ಅಂಕಗಳಿಸಿದ್ದಾರೆ.
ಬೇಗಾರು ಪಂಚಾಯಿತಿ ಬೇಗಾರು ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ ಶೇ 77.44, ಹೊಳೆಕೊಪ್ಪ ಸರ್ಕಾರಿ ಪ್ರೌಢಶಾಲೆ ಶೇ. 89, ಕೂತಗೋಡು ಪಂಚಾಯಿತಿ ವೈಕುಂಠಪುರ ಸರ್ಕಾರಿ ಪ್ರೌಢಶಾಲೆ ಶೇ. 85, ಪಟ್ಟಣದ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆ ಶೇ. 88 ಫಲಿತಾಂಶ ಪಡೆದುಕೊಂಡಿದ್ದು, ಸೌಮ್ಯ ವಿ.ಎಲ್ (584), ರಕ್ಷಿತಾ (582) ಅತಿ ಹೆಚ್ಚು ಅಂಕಗಳಿಸಿದ್ದಾರೆ.