ನರಸಿಂಹ ಜಯಂತಿ ಮಹೋತ್ಸವ
ತರೀಕೆರೆ: ಯೋಗಾ ನರಸಿಂಹ ಸೇವಾ ಟ್ರಸ್ಟ್ ಬಗ್ಗವಳ್ಳಿ ಮತ್ತು ಗ್ರಾಮಸ್ಥರ ವತಿಯಿಂದ ಮಂಗಳವಾರ ಸಮೀಪದ ಶ್ರೀಕ್ಷೇತ್ರ ಬಗ್ಗವಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಹೊಯಳ್ಸರ ಕಾಲದ ಶಿಲ್ಪ ಕಲಾ ವೈಭವದ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ನರಸಿಂಹ ಜಯಂತಿ ಮಹೋತ್ಸವವವನ್ನು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು.
ದೇವಸ್ಥಾನದಲ್ಲಿ ನರಸಿಂಹ ಹೋಮ ಮತ್ತು ಪವಮಾನ ಹೋಮ ನಡೆಯಿತು.
ಶ್ರೀ ಕ್ಷೇತ್ರದಲ್ಲಿರುವ ಅಭಿನವ ಚೆನ್ನಕೇಶವಸ್ವಾಮಿ, ಶಾರದಾಂಬ ದೇವಿ ಮತ್ತು ನರಸಿಂಹಸ್ವಾಮಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ ಮಹಾ ಮಂಗಳಾರತಿ ಏರ್ಪಡಿಸಲಾಗಿತ್ತು.
ಯೋಗಾ ನರಸಿಂಹ ಸ್ವಾಮಿ ಸೇವಾ ಟ್ರಸ್ಟ್ ಎಂ.ಎಸ್. ಕೃಷ್ಣಮೂರ್ತಿ, ಟ್ರಸ್ಟ್ನ ಸದಸ್ಯರು, ಶಿವಮೂರ್ತಿ, ಗ್ರಾಮಸ್ಥರು ಮತ್ತು ತಾಲೂಕಿನ ಸುತ್ತಮುತ್ತ ಊರುಗಳಿಂದ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ನೂರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾತೆಯರಿಂದ ದೇವರ ನಾಮ ಭಜನೆ ಏರ್ಪಡಿಸಲಾಗಿತ್ತು.