ಮೊಬೈಲ್ ಟವರ್ ಸ್ಥಾಪನೆಗೆ ವಿರೋಧ
ಕ.ಪ್ರ.ವಾರ್ತೆ ್ಣ ಮೂಡಿಗೆರೆ ್ಣ ಮೇ 16
ಗಿರಿಜನರ ಅಭಿವೃದ್ಧಿಗೆ ತಾಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸಿ ಕಾಮಗಾರಿಗೆ ಗ್ರಾಮಸ್ಥರು ಅಡ್ಡಿಪಡಿಸಿದರು.
ಗ್ರಾಮದ ಚಂದ್ರಪ್ಪ ಮಾತನಾಡಿ, ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನಳ್ಳಿ ಅಂಬೇಡ್ಕರ್ ನಗರದ ಸರ್ವೆ ನಂಬರ್ 82ರಲ್ಲಿ 750 ಕ್ಕೂ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವ ಗಿರಿಜನರ ಅಭಿವೃದ್ಧಿಗಾಗಿ ಗಿರಿಜನರ ಕುಶಲ ಕೈಗಾರಿಕಾ ಕೇಂದ್ರದ ಕಟ್ಟಡವನ್ನು ಸರ್ಕಾರ ನಿರ್ಮಿಸಿಕೊಟ್ಟಿತ್ತು.
ಕಾಲಕ್ರಮೇಣ ಕಟ್ಟಡ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಬೀಳುವ ಸಂಭವವಿರುವುದರಿಂದ ಸಂಬಂಧಪಟ್ಟ ಇಲಾಖೆಗೆ ಶಿಥಿಲಗೊಂಡ ಕಟ್ಟಡ ದುರಸ್ತಿಗೆ ಹಲವು ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಾರಣ ಗಿರಿಜನರು ತಮ್ಮ ಮನೆಗಳಲ್ಲೇ ಕುಶಲ ಕೈಗಾರಿಕೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದನ್ನರಿತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ನಿರ್ಮಿಸಲು ಅನುಮತಿ ನೀಡಿದ್ದಾರೆ. ಕೂಡಲೇ ಮೊಬೈಲ್ ಟವರ್ ನಿರ್ಮಾಣ ರದ್ದುಪಡಿಸಿ ಕುಶಲ ಕೈಗಾರಿಕಾ ಕೇಂದ್ರ ಅಭಿವೃದ್ಧಿಪಡಿಸಬೇಕು. ತಪ್ಪಿದಲ್ಲಿ ಗ್ರಾಮ ಪಂಚಾಯಿತಿ ಬೀಗ ಜಡಿಯುವುದರ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.