ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಜ್ಞಾವಂತ ಮತದಾರರ ಗೆಲವು: ಬಿಜೆಪಿ

Lingaraj Badiger
Updated On : 19 May 2014, 10:40 am

ಬಾಳೆಹೊನ್ನೂರು: ದೇಶದಲ್ಲಿ ಪ್ರಸ್ತುತ ಲೋಕಸಭಾ ಚುನಾವಣೆಯ ಗೆಲವು ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಗೆಲವು ಬಿಜೆಪಿ ಬೆಂಬಲಿಸಿದ ಪ್ರಜ್ಞಾವಂತ ಮತದಾರರಿಗೆ ಸಲ್ಲುತ್ತದೆ ಎಂದು ನರಸಿಂಹರಾಜಪುರ ತಾಲೂಕು ಬಿಜೆಪಿ ವಕ್ತಾರ ಬಿ. ಜಗದೀಶ್ಚಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ದೇಶದ ಇತಿಹಾಸದಲ್ಲಿ ಕಂಡರಿಯದ ಸೋಲನ್ನು ಅನುಭವಿಸಿದ್ದು, ಇದರ ಕಾರಣ ಹುಡುಕಲು ಆ ಪಕ್ಷದ ಮುಖಂಡರಿಗೆ ಇನ್ನೂ ಹಲವು ವರ್ಷ ಬೇಕು.
ಆ ಹೊತ್ತಿಗಾಗಲೇ ನರೇಂದ್ರ ಮೋದಿ ಅವರು ಈ ದೇಶವನ್ನು ಸದೃಢರಾಗಿ ಕಟ್ಟುತ್ತಾರೆ. ಜನತೆ ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸ ಹಾಳು ಮಾಡದೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಲ್ಲದೆ, ದೇಶ ಕಾಯುವ ಸೈನಿಕನಿಂದ ಹಿಡಿದು ಹೊಲದಲ್ಲಿ ಕೆಲಸ ಮಾಡುವ ರೈತನವರೆಗೂ ಮೋದಿ ಅಭಿವೃದ್ಧಿ ತಲುಪಲಿದೆ. ಕಾಂಗ್ರೆಸ್‌ನ ಸೇಡಿನ ರಾಜಕಾರಣ, ಜಾತಿ ರಾಜಕಾರಣವು ಆ ಪಕ್ಷಕ್ಕೆ ತಿರುಗುಬಾಣವಾಗಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಜನ ಮತ ಚಲಾಯಿಸಿದ್ದಾರೆ ಎಂದರು.

ಕಾರ್ಯಕರ್ತರಿಗೆ ಕೃತಜ್ಞತೆ

ತರೀಕೆರೆ: ಬಿಜೆಪಿಗೆ ದೊರೆತ ವಿಜಯ ದೇಶದ ಮಹಾಜನತೆಗೆ ದೊರೆತ ವಿಜಯವಾಗಿದೆ ಎಂದು ಬಿಜೆಪಿ ಮುಖಂಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಟಿ.ಎಚ್. ಎಲ್. ರಮೇಶ್ ತಿಳಿಸಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಅಭಿನಂದಿಸಿದ ಅವರು  ಬಹುಮತ ನೀಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರಾದ ಕ್ಷೇತ್ರದ ಮತದಾರ ಬಂಧುಗಳಿಗೆ, ಶ್ರಮಿಸಿದ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement