ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಬಹುಮತ

Lingaraj Badiger
Updated On : 20 May 2014, 10:42 am

ಚಿಕ್ಕಮಗಳೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಉತ್ತಮ ನಿರ್ಧಾರ ಕೈಗೊಂಡು ಬಿಜೆಪಿಗೆ ಬಹುಮತ ತಂದು ಕೊಟ್ಟಿದ್ದಾರೆ ಎಂದು ಜಿಪಂ ಸದಸ್ಯ ಎಂ.ಎಸ್. ನಿರಂಜನ್ ಹೇಳಿದ್ದಾರೆ.
ತಾಲೂಕಿನ ಮುಗುಳವಳ್ಳಿ, ಮರ್ಲೆ, ಹೊಸಕೋಟೆ, ಈಶ್ವರಹಳ್ಳಿ, ಗಾಳಿಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭಾರಿ ಮತಗಳ ಅಂತರದಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಗುಜರಾತ್ ನಲ್ಲಿ ಅಭಿವೃದ್ಧಿಪರ ಆಡಳಿತಕ್ಕೆ ಮಾರುಹೋಗಿ ದೇಶಕ್ಕೂ ಇದೇ ಆಡಳಿತ ಬೇಕೆಂಬ ನಿರ್ಧಾರಕ್ಕೆ ಜನರು ಬಂದಿದ್ದಾರೆ ಎಂದರು.
ಭವ್ಯ ಭಾರತದ ಕನಸು: ದೇಶದ ಜನ 10 ವರ್ಷಗಳಿಂದ ಯುಪಿಎ ಸರ್ಕಾರದ ಆಡಳಿತದಿಂದ ಬೇಸತ್ತಿದ್ದರು. ಇದೀಗ ಭವ್ಯ ಭಾರತದ ಕನಸು ಕಟ್ಟಿ ನರೇಂದ್ರ ಮೋದಿಯವರ ಆಳ್ವಿಕೆಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದ್ದು, ಇದಕ್ಕೆ ನರೇಂದ್ರ ಮೋದಿಯವರ ವಿಚಾರಧಾರೆಗಳೇ ಕಾರಣ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಎಂ.ಡಿ. ರವಿ, ಈಶ್ವರಹಳ್ಳಿ ಗ್ರಾಪಂ ಉಪಾಧ್ಯಕ್ಷ ಗಾಳಿಹಳ್ಳಿ ಶಿವಾನಂದ್, ಬಿಜೆಪಿ ಮುಖಂಡ ದಿನೇಶ್ ಮತ್ತು ಪಕ್ಷದ ಕಾರ್ತಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement