ಜೈನ ಮುನಿ ಪುರ ಪ್ರವೇಶ
ಚಿಕ್ಕಮಗಳೂರು: ದಿಗಂಬರ ಜೈನ ಮುನಿ ಪ್ರಸಂಗ ಸಾಗರ ಮುನಿಗಳು ಶುಕ್ರವಾರ ಚಿಕ್ಕಮಗಳೂರು ಪುರ ಪ್ರವೇಶ ಮಾಡಿದರು.
ಗುರುವಾರ ರಾತ್ರಿ ಸಖರಾಯಪಟ್ಟಣದಲ್ಲಿ ತಂಗಿದ್ದ ಮುನಿಗಳು, ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಯಲ್ಲಿ ನಗರಕ್ಕೆ ಆಗಮಿಸಿದರು.
ತುಮಕೂರು, ದಾವಣಗೆರೆ, ಲಕ್ಕವಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಧರ್ಮಪ್ರಚಾರದಲ್ಲಿ ಪಾಲ್ಗೊಂಡಿರುವ ಮುನಿಗಳು ಚಿಕ್ಕಮಗಳೂರಿನಲ್ಲಿ ಶುಕ್ರವಾರ ಜೈನ ಧರ್ಮ ಮತ್ತು ಕೇವಲ ಜ್ಞಾನದ ಕುರಿತು ಸುಮಾರು 2 ಗಂಟೆಗಳ ಕಾಲ ಪ್ರವಚನ ಮಾಡಿದರು.
ಬೆಳಗ್ಗೆ ನಗರದ ಜೈನ ಶ್ರಾವಕ ಜಿನೇಂದ್ರ ಅವರ ಗೃಹದಲ್ಲಿ ಕಠಿಣವಾದ ವಿಧಿವಿಧಾನದಂತೆ ಆಹಾರ ಸ್ವೀಕರಿಸಿದರು. 3 ದಿನಗಳ ಕಾಲ ಚಿಕ್ಕಮಗಳೂರು ತಾಲೂಕಿನ ಮತ್ತಾವರದ ಪಾರ್ಶ್ವನಾಥ ತೀರ್ಥಂಕರ ಬಸದಿ ಸೇರಿ ವಿವಿಧ ಜೈನ ಬಸದಿಗಳಿಗೆ ಭೇಟಿ ನೀಡಿ ಪ್ರವಚನ ಮಾಡಿ, ಕಳಸ, ಧರ್ಮಸ್ಥಳದವರೆಗೂ ಕಾಲ್ನಡಿಗೆಯಲ್ಲಿ ಸಾಗಲಿದ್ದಾರೆ.