ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜಗೋಪುರ ಉದ್ಘಾಟನೆ ಜೂ. 1ರಿಂದ

Rashmi Kasaragodu
Updated On : 24 May 2014, 11:10 am

ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 127 ಅಡಿ ಎತ್ತರದ ರಾಜಗೋಪುರದ ಉದ್ಘಾಟನಾ ಕಾರ್ಯಕ್ರಮ ಹಾಗೂ ರಾಜಗೋಪುರ ಕುಂಭಾಭಿಷೇಕ ಮಹೋತ್ಸವ ಜೂ. 1ರಿಂದ 13 ರವರೆಗೆ ನಡೆಯಲಿದೆ.
13 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನ್ 1ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಅಂದು ಲಕ್ಷಮೋದಕ ಗಣಪತಿ ಹೋಮ, ಜೂ. 2ರಿಂದ 13 ರವರೆಗೆ ಅತಿರುದ್ರ ಮಹಾಯಾಗ, ಜೂ. 2ರಿಂದ 12 ರವರೆಗೆ ಕೋಟಿ ಕುಂಕುಮಾರ್ಚನೆ, ಜೂ. 4 ರಿಂದ 6 ರವರೆಗೆ ರಾಜಗೋಪುರ ಕುಭಾಭಿಷೇಕ ಪ್ರಯುಕ್ತ ಧಾರ್ಮಿಕ ವಿಧಿ- ವಿಧಾನಗಳು ನೆರವೇರಲಿದೆ.
ಜೂ. 6 ರಿಂದ 8 ರವರೆಗೆ ಸಹಸ್ರ ಚಂಡಿಯಾಗ, ಜೂ. 8 ರಂದು ರಾಜಗೋಪುರದ ಕುಂಭಾಭಿಷೇಕ ಹಾಗೂ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಜೂ 9 ರಂದು ಚೆನೈನ ವಿದುಷಿ ಉಣ್ಣಿಕೃಷ್ಣನ್ ತಂಡದವರಿಂದ ಹಾಡುಗಾರಿಕೆ, ಜೂ. 10ರಂದು ಚೆನೈನ ಕದ್ರಿ ಗೋಪಾಲನಾಥನ್ ತಂಡದವರಿಂದ ಸ್ಯಾಕ್ಸಾಫೋನ್ ವಾದನ, ಜೂ. 11ರಂದು ಚೆನೈನ ವಿದ್ವಾನ್ ಶ್ರೀರಾಮಕೃಷ್ಣಮೂರ್ತಿ ತಂಡದವರಿಂದ ಹಾಡುಗಾರಿಕೆ, ಜೂ. 12ರಂದು ಮೈಸೂರು ವಿದ್ವಾನ್ ಶ್ರೀಶಿವಶಂಕರ ಸ್ವಾಮಿ ತಂಡದವರಿಂದ ಲಯಲಹರಿ, ಜೂ.13 ರಂದು ಶೆಂಕೊಟ್ಟೈ ವಿದ್ವಾನ್ ಶ್ರೀಹರಿಹರ ಸುಬ್ರಮಣ್ಯ ಭಾಗವತರು ಹಾಗೂ ಸಂಗಡಿಗರಿಂದ ನಾಮಕೀರ್ತನೆ.
ರಾತ್ರಿ 9.30ಕ್ಕೆ ಕಾಸರಗೋಡು ಮಲ್ಲಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದವರಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement