ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಐಟಿಐ ಪ್ರವೇಶಕ್ಕೆ ಅರ್ಜಿ ಅಹ್ವಾನ

Rashmi Kasaragodu
Updated On : 26 May 2014, 11:02 am

ಚಿಕ್ಕಮಗಳೂರು: ಸಖರಾಯಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಎಂ.ಆರ್.ಎ.ಸಿ., ಫಿಟ್ಟರ್, ಐಟಿ ಮತ್ತು ಇ.ಎಸ್.ಎಂ., ಎಂ.ಎಂ.ವಿ., ಟರ್ನರ್, ಡೀಸೆಲ್ ಮೆಕ್ಯಾನಿಕ್ ವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ.5 ಕೊನೆಯ ದಿನವಾಗಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ ಢಿಢಿಢಿ.ಜಟಠಡ್ಠ್ಜಿ.್ಞಛ್ಠ.ಟ್ಝ್ಛಿ.್ಝಟಿ, ಢಿಢಿಢಿ.ಜಜಡ್ಞಿಛ್ಠಟಿಛಡಿಛ್ಞಛ.್ಟ್ಠ್ಜ.್ಝಟಿ ಅಥವಾ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಸಖರಾಯಪಟ್ಟಣ ದೂ.08267-244075 ಇವರನ್ನು ಸಂಪರ್ಕಿಸಿ.
ಪಿಸಿ ನೇಮಕ: ದೇಹದಾರ್ಢ್ಯ ಪರೀಕ್ಷೆ ಮುಂದಕ್ಕೆ
ಚಿಕ್ಕಮಗಳೂರು ಜಿಲ್ಲಾ ಘಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಸಂಬಂಧವಾಗಿ ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ದೇಹದಾರ್ಢ್ಯ ಪರೀಕ್ಷೆ ನಡೆಸಲಾಗುತ್ತಿದ್ದು, ಮೇ 31ರಂದು ನಡೆಯಬೇಕಾಗಿದ್ದ ದೈಹಿಕ ಅರ್ಹತಾ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದ್ದು, ಸದರಿ ಪರೀಕ್ಷೆಯು ಜೂ.3ರಂದು ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ ನಾಳೆ
ಬಾಳೆಹೊನ್ನೂರು: ಬಾಳೆಹೊನ್ನೂರು ವಿದ್ಯುತ್ ಕೇಂದ್ರದಲ್ಲಿ ಶೃಂಗೇರಿ- ಜಯಪುರ-ಕಳಸ ಮಾರ್ಗಕ್ಕೆ ವಿದ್ಯುತ್ ಸರಬರಾಜು ಆಗುವ ಪರಿವರ್ತಕವನ್ನು ಹೆಚ್ಚಿನ ಸಾಮರ್ಥ್ಯದ ಶಕ್ತಿ ಪರಿವರ್ತಕದಿಂದ ಬದಲಾವಣೆ ಮಾಡಬೇಕಾದ ಕಾರಣ 27ರ ಬೆಳಗ್ಗೆ 10ರಿಂದ 28ರ ರಾತ್ರಿ 10 ಗಂಟೆಯವರೆಗೆ ಶೃಂಗೇರಿ ತಾಲೂಕು, ಕೊಪ್ಪ ತಾಲೂಕು, ಜಯಪುರ ಮತ್ತು ಕಳಸ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ನೀರಿನ ವ್ಯವಸ್ಥೆಯ ಮಾಡಿಕೊಳ್ಳಬೇಕು ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಸಹಕರಿಸಬೇಕು ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯ್‌ಕುಮಾರ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಇಲ್ಲಿನ ರಂಭಾಪುರಿ ಪೀಠದ ಆಶ್ರಯದ ಬೆಂಗಳೂರು ಚಿಕ್ಕಪೇಟೆಯ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯ ಫ್ರೀ ಬೋರ್ಡಿಂಗ್ ಮಹಂತಿನ ಮಠದಲ್ಲಿ ವೇದ, ಆಗಮ, ಸಂಸ್ಕೃತ, ಜೋತಿಷ್ಯ ಕಲಿಯ ಬಯಸುವ ವೀರಶೈವ ಬಡ ಜಂಗಮ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಂತಿನ ಮಠದ ಜೋತಿಷ್ಯ ಪಾಠ ಶಾಲೆಯಲ್ಲಿ ಅಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳು ಮೇ 31ರೊಳಗೆ ಅರ್ಜಿ ಪಡೆದು ಸಲ್ಲಿಸಬೇಕು. ಜೂ.2ರಂದು ಬೆಳಗ್ಗೆ 10 ಗಂಟೆಗೆ ಮಹಂತಿನ ಮಠದಲ್ಲಿ ತಮ್ಮ ಪೋಷಕರೊಂದಿಗೆ ಮುಕ್ತ ಸಂದರ್ಶನಕ್ಕೆ ಹಾಜರಾಗಬೇಕು. 10ನೇ ತರಗತಿಯವರೆಗೆ, ಅದರ ಮೇಲ್ಪಟ್ಟು ಉತ್ತೀರ್ಣ, ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಅಭ್ಯಾಸ, ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ಮಾಹಿತಿಗಾಗಿ 080-22872326, 22281043, ಮೊ- 99809 71394  ಸಂಪರ್ಕಿಸಬಹುದು ಎಂದು ಶ್ರೀಪೀಠದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement