ಬಂದೂಕು ಪರವಾನಗಿಗೆ ಭಾವಚಿತ್ರ
ನರಸಿಂಹರಾಜಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಡಿಪಾಸಿಟ್ ಮಾಡಲಾಗಿದ್ದ ಲೈಸನ್ಸ್ ಹೊಂದಿದ್ದ ಬಂದೂಕುಗಳನ್ನು ಈಗ ವಾರುಸುದಾರರು ವಾಪಾಸು ಪಡೆಯಲು ಠಾಣೆಗೆ ಬರುವಾಗ ನವೀಕರಣಗೊಂಡಿರುವ ಬಂದೂಕು ಪರವಾನಗಿ ಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನು ತರಬೇಕು ಎಂದು ಪೊಲೀಸ್ ಠಾಣಾಧಿಕಾರಿ ಮಂಜೇಶ್ವರ ತಿಳಿಸಿದ್ದಾರೆ.