ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಶತವಾರು ರುದ್ರಾಭಿಷೇಕ

Rashmi Kasaragodu
Updated On : 26 May 2014, 11:00 am

ಕ.ಪ್ರ.ವಾರ್ತೆ, ತರೀಕೆರೆ, ಮೇ 25 ಪಟ್ಟಣದ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಭಾನುವಾರ ವೇ.ಬ್ರ.ಶ್ರೀ. ಕೃಷ್ಣಭಟ್ ಮತ್ತು ಶಿಷ್ಯರಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಮಹಾನ್ಯಾಸ ಪೂರ್ವಕ ಸತತ ಎಂಟು ಗಂಟೆ ಶತವಾರು ರುದ್ರಾಭಿಷೇಕವನ್ನು  ವೈಭವದಿಂದ ಏರ್ಪಡಿಸಲಾಗಿತ್ತು.
ಮಹನ್ಯಾಸಪೂರ್ವಕವಾಗಿ 26ಕ್ಕೂ ಹೆಚ್ಚು ಮಂದಿ ಸಸ್ವರ ವೇದಮಂತ್ರಗಳೊಂದಿಗೆ ಶತವಾರು ರುದ್ರಾಭಿಷೇಕ ಮಂತ್ರವನ್ನು ಸುಶ್ರಾವ್ಯವಾಗಿ ಪಠಿಸಿದರು.
ನೂರಾರು ಭಕ್ತರು ಭಾಗಿ: ಹೃಷಿಕೇಶದ ನಿಜಾನಂದ ಭಾರತಿ ಶ್ರೀ, ತರೀಕೆರೆ ಮತ್ತು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಜರುಗಿದ ಶತವಾರು ರುದ್ರಾಭಿಷೇಕದ ಸಂದರ್ಭದಲ್ಲಿ ಭಾಗವಹಿಸಿದ್ದರು.
ನಂತರ ಹೃಷೀಕೇಶದ ನಿಜಾನಂದ ಭಾರತಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಮಾತನಾಡಿ, ವೇ.ಬ್ರ.ಶ್ರೀ ಕೃಷ್ಣಭಟ್ ಐದು ವರ್ಷಗಳ ಕಾಲ ಪ್ರತಿನಿತ್ಯ ಸಸ್ವರ ವೇದಮಂತ್ರಗಳಲ್ಲಿ ಶಿಷ್ಯರನ್ನು ವಿಧ್ಯುಕ್ತವಾಗಿ ತರಬೇತುಗೊಳಿಸಿ ದೇವಸ್ಥಾನದಲ್ಲಿ ಇಂದು ಶತವಾರು ರುದ್ರಾಭಿಷೇಕ ಕಾರ್ಯಕ್ರಮ ನಡೆಸಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ತಿಳಿಸಿದರು.
ವೇ.ಬ್ರ.ಶ್ರೀ.ಸೂರ್ಯನಾರಾಯಣ ಶರ್ಮ ಮಾತನಾಡಿ, ಸಸ್ವರ ವೇದಮಂತ್ರಗಳನ್ನು ಶ್ರವಣ ಮಾಡುವುದೇ ಒಂದು ಸಂತೋಷದ ಕ್ಷಣಗಳು, ವೇದಮಂತ್ರಗಳಲ್ಲಿ ಶಿಷ್ಯರನ್ನು ತರಬೇತಿಗೊಳಿಸಿರುವುದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ವೇ.ಬ್ರ.ಶ್ರೀ ಟಿ.ಸಿ. ಭಾಸ್ಕರ ಭಟ್, ಡಿ.ವಿ.ಕೃಷ್ಣಮೂರ್ತಿ ಮಾತನಾಡಿದರು. ವೇ.ಬ್ರ.ಶ್ರೀ ಕೃಷ್ಣಭಟ್, ನಾಗಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಮಾತೆಯರಿಂದ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭುವನಕೋಟೆ ಸತ್ಯನಾರಾಯಣ್, ಟಿ.ಎಸ್. ಚಂದ್ರಶೇಖರ್, ನಾರಾಯಣಸ್ವಾಮಿ, ಶಂಕರ ಸಪ್ತಾಹ ತಾ. ಸಂಚಾಲಕ ಬಿ.ಎಚ್. ಕುಮಾರಸ್ವಾಮಿ, ಡಿ.ಸಿ. ಶ್ರೀನಿವಾಸಮೂರ್ತಿ, ಮಂಜುನಾಥ್, ಎಚ್.ವಿ. ಸತ್ಯನಾರಾಯಣ್, ಸೋಮಶೇಖರ್, ರಾಧಾಕೃಷ್ಣ, ವಿದ್ಯಾಶಂಕರ, ಅಂಚೆ ಕಚೇರಿ ಪ್ರಧಾನ ಅಧೀಕ್ಷಕ ಗುಂಡಣ್ಣ, ಎನ್.ಎಸ್. ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement