ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Vishwanath S
Updated On : 27 May 2014, 11:13 am

ತರೀಕೆರೆ:  ಭಾರತೀಯ ಕಿಸಾನ್ ಸಂಘ- ಕರ್ನಾಟಕ ಪ್ರದೇಶ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಸೋಮವಾರ ಸಮೀಪದ ಅಜ್ಜಂಪುರ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿನ ಅವ್ಯವಸ್ಥೆ ಖಂಡಿಸಿ, ಅಜ್ಜಂಪುರ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಯಿತು.
ರಾಸುಗಳಿಗೆ ಮೇವಿನ ಕೊರತೆ ಇದೆ. ರೊಪ್ಪಗಳಲ್ಲಿ ಸಗಣಿಯನ್ನೇ ತೆಗೆದಿಲ್ಲ. ತಜ್ಞರ ಸಮಿತಿ ರಚನೆ ಮಾಡಿದ್ದರೂ ಅಮೃತಮಹಲ್‌ನಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಪಶು ಸಂಗೋಪನಾ ಸಚಿವರು, ಉಪ ಲೋಕಾಯುಕ್ತರು, ಸರ್ಕಾರದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವ್ಯವಸ್ಥೆ ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೂ, ಸಮಸ್ಯೆ ಬರೆಹರಿಸಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚಲಿಸುವ ಬ್ಯಾಂಕ್: ನಂತರ ನಡೆದ ಸಭೆಯಲ್ಲಿ ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಸಿ. ಗಂಗಾಧರ್ ಕಾಸರಘಟ್ಟ ಮಾತನಾಡಿ, ಅಮೃತಮಹಲ್ ತಳಿಗಳ ಹಾಲಿನಲ್ಲಿ ಔಷಧೀಯ ಗುಣಗಳಿವೆ. ಗೋವುಗಳು ಚಲಿಸುವ ಬ್ಯಾಂಕ್ ಇದ್ದಂತೆ ಎಂದರು.
ಪ್ರದೇಶ ಕೋಶಾಧ್ಯಕ್ಷ ಶಾಂತಪ್ಪ ಗೌಡ ಮಾತನಾಡಿ, ಅಮೃತಮಹಲ್ ತಳಿ  600 ವರ್ಷ ಹಳೆಯದು, ಆದರೆ ಇಂದು ತಳಿಗಳು ಅಳಿದು ಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ವೀರಭದ್ರಪ್ಪ, ಪ್ರಕಾಶ್ ಮತ್ತಿತರರು ಮಾತನಾಡಿದರು. ಅಮೃತಮಹಲ್ ಕಾವಲು ಉಳಿಸಿ ಹೋರಾಟ ಪ್ರಧಾನ ಸಂಚಾಲಕ ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಸಿ.ಗಂಗಾಧರ್ ಕಾಸರಘಟ್ಟ, ಪ್ರಾಂತ ಕಾರ್ಯದರ್ಶಿ ಕೆ. ಪರಮೇಶ್ವರಪ್ಪ, ಪ್ರದೇಶ ಕೋಶಾಧ್ಯಕ್ಷರು ಎಂ.ಜಿ. ಶಾತಪ್ಪಗೌಡ, ಜಿಲ್ಲಾ ಉಪಾಧ್ಯಕ್ಷ ಕಲ್ಲಶೆಟ್ಟಿಹಳ್ಳಿ ವೀರಭದ್ರಪ್ಪ, ಆರ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಬನ್ ಬಾಬು, ಎಲ್.ಈ.ಪ್ರಕಾಶ್, ತಾಲೂಕು ಕಾರ್ಯದರ್ಶಿ ಶಿವಣ್ಣ, ಲಿಂಗದಹಳ್ಳಿ ಗಿರೀಶ್, ಶಿವಕುಮಾರಯ್ಯ, ಮಧು, ನಾಗು, ದಿಲೀಪ್ ಲಿಂಗದಹಳ್ಳಿ ಹೋಬಳಿ ಕಾರ್ಯಕರ್ತರು, ಕಲ್ಲಶೆಟ್ಟಿಹಳ್ಳಿ ಮತ್ತು ಸೊಕ್ಕೆ ಕಾರ್ಯಕರ್ತರು  ರೈತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 ಪ್ರತಿಭಟನೆಯ ನಂತರ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ಸದಸ್ಯರು, ರೈತರು, ಗ್ರಾಮಸ್ಥರು ನಾಡಕಚೇರಿಗೆ ತರಳಿ ಉಪತಹಸೀಲ್ದಾರರಿಗೆ ಮನವಿ  ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement