ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೆರೆಮರೆ ಕಸರತ್ತು

Vishwanath S
Updated On : 27 May 2014, 11:13 am

ಮೂಡಿಗೆರೆ: ತಾಲೂಕು ಪಂಚಾಯಿತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಧಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.  ಸರ್ಕಾರ ಈಗ ಅಧ್ಯಕ್ಷರ ಹುದ್ದೆಯನ್ನು ಸಾಮಾನ್ಯಕ್ಕೆ ಮೀಸಲಿರಿಸಿದ್ದು, ಅಧ್ಯಕ್ಷರ ಸ್ಥಾನಕ್ಕೆ ತೆರೆಮರೆಯಲ್ಲಿ ಕಸರತ್ತುಗಳು ನಡೆಯುತ್ತಿವೆ. ತಾಪಂನಲ್ಲಿ ಬಿಜೆಪಿ-5, ಕಾಂಗ್ರೆಸ್-5,ಜೆಡಿಎಸ್-3 ಒಟ್ಟು 13 ಜನ ಸದಸ್ಯರಿದ್ದು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಅಧ್ಯಕ್ಷರ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಸಹಕಾರ ಕೊಟ್ಟ ಕಾರಣ ಕಾಂಗ್ರೆಸ್ ಈ ಬಾರಿ ಬಿಜೆಪಿ ಬೆಂಬಲಿಸುವ ಸಾಧ್ಯತೆಗಳು ಬಹುತೇಕ ಕಂಡು ಬರುತ್ತಿದೆ.  
ಈಬಾರಿ ಸಾಮಾನ್ಯ ಮೀಸಲಿನಲ್ಲಿ ಅಧ್ಯಕ್ಷರ ಗದ್ದುಗೆ ಏರಲು ಜೆಡಿಎಸ್ ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದು. ಇದನ್ನರಿತ ಇತರ ಎರಡು ಪಕ್ಷಗಳು ಮತ್ತೆ ಅಧ್ಯಕ್ಷರ ಗಾದಿಗೆಗೆ ಒಳ ಒಪ್ಪಂದದ ಕಸರತ್ತು ನಡೆಯುತ್ತಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಈ ಅಧ್ಯಕ್ಷರ ಗಾದಿಗೆ ನಡೆಯುತ್ತಿರುವ ರೇಸಿನಲ್ಲಿ ಬಿಜೆಪಿಯ ನೇಪಾ ಆದಿತ್ಯ, ಕಾಂಗ್ರೆಸ್‌ನ ಸುಬ್ರಾಯಗೌಡ(ಪಾಪಣ್ಣ), ಜೆಡಿಎಸ್‌ನ ರಂಜನ್ ಅಜಿತ್ ಕುಮಾರ್ ಮತ್ತು ಹಿತ್ಲಮಕ್ಕಿ ರಾಜೇಂದ್ರ ಅವರು ಇದ್ದು, ಒಳ ಒಪ್ಪಂದ ನಡೆಯದೇ ಇದ್ದಲ್ಲಿ ಜೆಡಿಎಸ್ ಮೂವರು ಅಭ್ಯರ್ಥಗಳು ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾರೋ ಅಥವಾ ಬೆಂಬಲ ಬಯಸುತ್ತಾರೋ ಅವರೇ ಅಧ್ಯಕ್ಷರ ಗಾದಿಗೆ ಏರುವುದು ಖಚಿತ. ಒಟ್ಟಿನಲ್ಲಿ ಅಧ್ಯಕ್ಷರ ಗಾದಿ  ಯಾರ ಮಡಿಲಿಗೆ ಎಂಬ ಕುತೂಹಲ ಕಾಡುತ್ತಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement