15ರಿಂದ ಯಕ್ಷಗಾನ ತರಬೇತಿ ಶಿಬಿರ
ಹಂಗಾರಕಟ್ಟೆ: ಇಲ್ಲಿನ ಯಕ್ಷಗಾನ ಕಲಾಕೇಂದ್ರದ ವತಿಯಿಂದ 15 ರಿಂದ 27 ರ ವರೆಗೆ ಶಾಲಾ ವಿದ್ಯಾರ್ಥಿಟ ವಿದ್ಯಾರ್ಥಿನಿಯರಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. 5ರಿಂದ 10ನೇ ತರಗತಿಯ ಒಳಗಿನ ಮಕ್ಕಳಿಗೆ ಶಿಬಿರದಲ್ಲಿ ಯಕ್ಷಗಾನ ಕುಣಿತ, ಮಾತುಗಾರಿಕೆಯನ್ನು ಕಲಿಸಲಾಗುವುದು. ಬೆಳಗ್ಗೆ 9.30 ರಿಂದ ಮಧ್ಯಾಹ್ನ 1ಗಂಟೆವರೆಗೆ ಶಿಬಿರ ನಡೆಯುತ್ತದೆ. ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡಲೇ ಮನೆಯವರ ಅನುಮತಿಯೊಂದಿಗೆ ಯಕ್ಷಗಾನ ಕಲಾಕೇಂದ್ರ, ಡಿವೈನ್ ಪಾರ್ಕ್ ಎದುರು, ಗುಂಡ್ಮಿಟ ಸಾಲಿಗ್ರಾಮ ಅಥವಾ ಮೊ. ಸಂಖ್ಯೆಟ 9880605610 ಅನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.