ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

5ರಂದು ಚಿಣ್ಣರ 'ದಣಿವರಿಯದ ಯಕ್ಷ ಮನೆ'

Vishwanath S
Updated On : 2 Apr 2013, 11:06 am

ಮಂಗಳೂರು: ಕೋಡಿಕಲ್.ನ ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳದ ದಶಮಾನೋತ್ಸವದ ಪ್ರಯುಕ್ತ ಏ. 5 ಮತ್ತು 6ರಂದು ಪುರಭವನದಲ್ಲಿ 'ದಣಿವರಿಯದ ಯಕ್ಷಮನೆ' ಯಕ್ಷಗಾನ ಬಯಲಾಟ ನಡೆಯಲಿದೆ.
ಜಿಲ್ಲೆಯ ವಿವಿಧ ಶಾಲೆಯ ಹತ್ತು ಮಕ್ಕಳ ತಂಡದಲ್ಲಿ 250 ಯಕ್ಷ ಕಲಾವಿದ ಚಿಣ್ಣರು ಕುಣಿಯಲಿದ್ದಾರೆ. 15 ಯಕ್ಷ ಗುರುಗಳು, 20 ಯಕ್ಷ ಕಲಾವಿದ ಸಂಘಟಕರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಂಸ್ಥೆಯ ನಿರ್ದೇಶಕ ರವಿ ಅಲೆವೂರು ವರ್ಕಾಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಯಕ್ಷಗಾನ ಪ್ರದರ್ಶನ: ಏ. 5ರಂದು ಬೆಳಗ್ಗೆ 9.15ಕ್ಕೆ ಮೇಳ ಉದ್ಘಾಟನೆಗೊಳ್ಳಲಿದ್ದು, 9.30ಕ್ಕೆ ಮುಗ್ರೋಡಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ವತಿಯಿಂದ 'ಸ್ಯಮಂತಕ ರತ್ನ' ಪ್ರಸಂಗ ನಡೆಯಲಿದೆ. ಬೆಳಗ್ಗೆ 11ರಿಂದ ಕಾಸರಗೋಡಿನ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ವತಿಯಿಂದ 'ಸುದರ್ಶನ ಗರ್ವಭಂಗ' ಪ್ರಸಂಗ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ 'ನರಕಾಸುರ ಮೋಕ್ಷ' ಪ್ರಸಂಗವನ್ನು ಪೈವಳಿಕೆ ಬೆನಕ ಯಕ್ಷಕಲಾ ವೇದಿಕೆ ನಡೆಸಿಕೊಡಲಿದೆ. ಮಧ್ಯಾಹ್ನ 2.30 ರಿಂದ ಪೆರ್ಲ ಪಡ್ರೆ ಚಂದು ಯಕ್ಷಗಾನ ಅಧ್ಯಯನ ಕೇಂದ್ರವು 'ವೀರ ಕುಶಲವ'.
ಸಂಜೆ 4ಕ್ಕೆ 'ಶ್ರೀ ಏಕಾದಶಿ ದೇವಿ ಮಹಾತ್ಮೆ' ಪ್ರಸಂಗವು ಕಿನ್ಯ ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿಕ ಕಲಾಸಂಪದ ತಂಡ ಪ್ರದರ್ಶಿಸುವರು. ಸಂಜೆ 5.30ಕ್ಕೆ ಕುಳಾಯಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿಯು 'ಶ್ರೀದೇವಿ ಮಹಿಷ ಮರ್ದಿನಿ' ಪ್ರದರ್ಶಿಸುವರು. 6.30ಕ್ಕೆ 'ದಕ್ಷಾಧ್ವರ' ಪ್ರಸಂಗವು ಪಣಂಬೂರು ಪದ್ಮನಾಭಯ್ಯ ಶಾನುಭೋಗ್ ಮಕ್ಕಳ ಮೇಳ ನಡೆಸಿಕೊಡುವರು.
ರಾತ್ರಿ 8 ರಿಂದ 11ರ ತನಕ ಕೋಡಿಕಲ್ ಸರಯೂ ಬಾಲಯಕ್ಷ ವೃಂದದಿಂದ 'ಶ್ರೀ ಕೃಷ್ಣ ಲೀಲಾರ್ಣವ' ಪ್ರಸಂಗನಡೆಯಲಿದೆ ಎಂದು ಹೇಳಿದರು.
ಏ. 6ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಗಣೇಶ್ ರಾವ್ ಅಧ್ಯಕ್ಷತೆ ವಹಿಸುವರು. ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜಿತ್ತಾಯ, ಶ್ರೀ ಕಟೀಲು ಕ್ಷೇತ್ರದ ಹರಿನಾರಾಯಣದಾಸ ಆಸ್ರಣ್ಣ ಪಾಲ್ಗೊಳ್ಳುವರು ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕರಾದ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷ ಮಧುಸೂದನ ಅಲೆವೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement