ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಂದಾಪುರ: ಕೆರೆಗೆ ಸ್ನಾನಕ್ಕೆ ಇಳಿದ ಯುವಕ ನೀರುಪಾಲು

Vishwanath S
Updated On : 2 Apr 2013, 11:08 am

ಕುಂದಾಪುರ: ಸ್ನಾನಕ್ಕೆಂದು ಹೋದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೆಂಚನೂರು ಗ್ರಾಮದ ತಲಗೆದ್ದೆಯಲ್ಲಿ ನಡೆದಿದೆ. ಉದಯ (19) ಮೃತರು. ಇವರು ಭಾನುವಾರ ಮನೆಯ ಕೃಷಿ ಕೆಲಸ ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಮನೆ ಸಮೀಪದ ಕೆರೆಗೆ ಸ್ನಾನಕ್ಕೆಂದು ಹೋದವರು ವಾಪಸ್ ಬಾರದೆ ಇರುವುದನ್ನು ಗಮನಿಸಿ ಸಂಶಯಗೊಂಡ ಆತನ ತಂದೆ ಕರಿಯ ಪೂಜಾರಿ, ತನ್ನ ಸಂಬಂಧಿಕರೊಂದಿಗೆ ಕೆರೆಯ ಪರಿಸರದಲ್ಲಿ ಹುಡುಕಿದರು. ನಂತರ ಕರೆಯ ದಡದಲ್ಲಿ ಉದಯನ ಕೃಷಿ ಕೆಲಸದ ಬಟ್ಟೆಬರೆ ಇರುವುದನ್ನು ಕಂಡು ಸಂಶಯಗೊಂಡು ಕೆರೆಗೆ ಇಳಿದು ಹುಡುಕಿದಾಗ ಉದಯನ ದೇಹವು ಕೆರೆಯ ನೀರಿನ ತಳಭಾಗದಲ್ಲಿ ಪತ್ತೆಯಾಯಿತು. ಆ ಕೂಡಲೆ ವಾಹನದಲ್ಲಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೂ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ಉದಯ ಸ್ನಾನಕ್ಕೆಂದು ಹೋದವನು ಆಕಸ್ಮಿಕವಾಗಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಈ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತರ ತಂದೆ ಕರಿಯ ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement