ಕೋವಿ ಠೇವಣಿ ಇಡಲು ಸೂಚನೆ
ವಿಟ್ಲ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೋವಿ ಪರವಾನಗಿದಾರರು ತಪ್ಪದೆ ತಮ್ಮ ಕೋವಿಗಳನ್ನು ಠಾಣೆಯಲ್ಲಿ ಅಥವಾ ಅಧಿಕೃತ ಪರವಾನಗಿ ಹೊಂದಿರುವ ಅಂಗಡಿಯಲ್ಲಿ ಠೇವಣಿ ಇಟ್ಟು ಮಾಹಿತಿಯನ್ನು ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಅವರಿಗೆ ನೀಡಬೇಕು ಎಂದು ಠಾಣೆ ಪ್ರಕಟಣೆ ತಿಳಿಸಿದೆ.