ಚುನಾವಣೆ ಹಿನ್ನೆಲೆ: 28 ಮಂದಿಯಿಂದ ಮುಚ್ಚಳಿಕೆ
ಸುಳ್ಯ: ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ಬೆಳ್ಳಾರೆಯ 21 ಮಂದಿಯಿಂದ ಹಾಗೂ ಕಲ್ಲುಗುಂಡಿಯ 7 ಮಂದಿಯಿಂದ ಮುಚ್ಚಳಿಕೆ ಬರೆಸುವಂತೆ ಸುಳ್ಯ ಎಸ್.ಐ. ಯವರು ತಹಸೀಲ್ದಾರ್.ಗೆ ಮನವಿ ಮಾಡಿದ್ದಾರೆ. ಸಂತೋಷ್ ಮಣಿಯಾಣಿ, ಕಿರಣ್ ಕುಮಾರ್, ಜಯಂತ ಎಂ., ಪುರಂದರ ಶೆಟ್ಟಿ, ಸುಭಾಶ್, ಮಧುಚಂದ್ರ, ಪದ್ಮನಾಭ ಗೌಡ, ಚಂದ್ರಯಾನೆ ಚಂದ್ರಶೇಖರ ಪಾಟಾಳಿ, ಬಿ. ನವೀನ್ ಕುಮಾರ್, ಚೆನ್ನಪ್ಪ, ಹರೀಶ್, ಹೇಮಂತ, ಹರೀಶ್, ಜಮಾಲುದ್ದೀನ್, ಜಾಕೀರ್ ಯಾನೆ ಜಾಸೀರ್, ಇಬ್ರಾಹಿಂ ನವಾಜ್ ಯಾನೆ ರವಾಜ್, ಉಮ್ಮರ್ ಫಾರೂಕ್, ಮಹಮ್ಮದ್ ಆರೀಫ್, ಫಮೀಜಾ, ಮಹಮ್ಮದ್ ಸಿದ್ದೀಕ್ ಎಂಬವರು ಬೆಳ್ಳಾರೆ ಇವಿನಿಂಗ್ ಸ್ಟಾರ್ ಫಾಸ್ಟ್.ಫುಂಡ್ ಸೆಂಟರ್.ನಲ್ಲಿ ಗಲಾಟೆ ಮಾಡಿ ಕೇಸಿಗೊಳಗಾಗಿದ್ದು, ಜಾಮೀನು ಪಡೆದು ಕೊಂಡಿದ್ದಾರೆ. ಇವರು ಮತ್ತೆ ಶಾಂತಿ ಕದಡುವ ಸಾಧ್ಯತೆ ಇದೆ. ಆದ್ದರಿಂದ ಇವರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ತಾಲೂಕು ದಂಡಾಧಿಕಾರಿಯ ವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಲ್ಲುಗುಂಡಿಯ ಚೆರಿಯಪ್ಪ ಯಾನೆ ಅಪ್ಪಕುಂಞ, ಸಂಪತ್.ಕುಮಾರ್, ಮನು ಯಾನ್ ಮನೋಹರ್, ರದೀಶ್ ನಾಯರ್, ಕೇಶವ ಕೆ., ಪ್ರವೀಣ ಬಿ., ದಿವಾಕರ ಕೆ.ಎನ್. ಅವರು ಈ ಹಿಂದೆ ಕಲ್ಲುಗುಂಡಿಯಲ್ಲಿ ಕೆಲವು ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದು, ಜಾಮೀನು ಪಡೆದುಕೊಂಡಿದ್ದಾರೆ ಎಂದು ತಹಸೀಲ್ದಾರ್.ರರಿಗೆ ಮಾಡಿದ ಮನವಿಯಲ್ಲಿ ತಿಳಿಸಿದ್ದಾರೆ.