ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್: ವೆಂಕಟ್, ಎಡ್ರಿಕ್.ಗೆ ಜಯ

Vishwanath S
Updated On : 2 Apr 2013, 11:09 am

ಮಣಿಪಾಲ: ಮಣಿಪಾಲದಲ್ಲಿ ನಡೆದ ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್ಟ  2013ರ ಸ್ಥಳೀಯ ಸುತ್ತಿನಲ್ಲಿ ಟಾಪ್ಮಿ ಕಾಲೇಜಿನ ವಿದ್ಯಾರ್ಥಿಗಳಾದ ವೆಂಕಟ್ ಮತ್ತು ಎಡ್ರಿಕ್ ಜಯ ಗಳಿಸಿದ್ದಾರೆ. 6ಕ್ಯು ಮಾದರಿಯಲ್ಲಿ ನಡೆದ 9ನೇ ಆವೃತ್ತಿಯ ಕ್ವಿಜ್ ಸ್ಪರ್ಧೆಯಲ್ಲಿ ಎಂಐಟಿಯ ಪೂರ್ವ ಸುರಾನ ಮತ್ತು ಸತೀಂದ್ರ ಡೆ ಅವರು ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದಾರೆ.
 ಟಾಪ್ಮಿ ಆಡಿಟೋರಿಯಂನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯ ಅವರು ರು.  75 ಸಾವಿರ, ರನ್ನರ್ ಅಪ್ ತಂಡಕ್ಕೆ ರು.  35 ಸಾವಿರ ನಗದು ಬಹುಮಾನ ನೀಡಿದರು. ಪ್ರಬಲ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ವಿಜೇತರ ಜೊತೆಗೆ ವಿಘ್ನೇಶ್ ಬಾಳಿಗ ಮತ್ತು ಡ್ಯಾನಿ ಥಾಮಸ್ (ಎನ್.ಎಂಎಎಂಐಟಿ), ಪ್ರಣವ್ ಮತ್ತು ಕಾರ್ತಿಕ್ ಭಟ್ (ಎನ್.ಐಟಿ ಸುರತ್ಕಲ್), ಚೈತನ್ಯ ಮತ್ತು ಅರ್ಪಿತ ಜೈನ್ (ಎನ್.ಐಟಿ ಸುರತ್ಕಲ್), ಅನಿಂದಿತ ರವಿಕುಮಾರ್ ಮತ್ತು ಸೌಮ್ಯಾರಾಣಿ (ಎನ್.ಐಟಿ ಸುರತ್ಕಲ್) ಆಯ್ಕೆಗೊಂಡಿದ್ದರು. ಈ ಸ್ಪರ್ಧೆಯ ವಿಜೇತ ಹಾಗೂ ರನ್ನರ್ ಅಪ್ ತಂಡಗಳು ಏ.7ರಂದು ನಡೆಯುವ ರಾಷ್ಟ್ರೀಯ ಫೈನಲ್ ಪ್ರವೇಶಿಸುತ್ತವೆ. ಇಲ್ಲಿ ವಿಜೇತರಾಗುವ ತಂಡ ಯುಕೆ ಮತ್ತು ಸಿಂಗಪುರ ತಂಡಗಳ ನಡುವೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸೆಣಸಲಿದೆ. ಟಾಟಾ ಕ್ರುಸಿಬಲ್ ಕ್ಯಾಂಪಸ್ ಕ್ವಿಜ್ ಮತ್ತೊಮ್ಮೆ ಭಾರತದ ಯುವ ಪೀಳಿಗೆಗೆ ಬೃಹತ್ ಅವಕಾಶ ನೀಡುತ್ತಿದೆ. ವಿಜೇತರಿಗೆ ರು.  5 ಲಕ್ಷ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement