ಮಹಿಳೆಗೆ ಕಿರುಕುಳ: ವ್ಯಕ್ತಿಗೆ ನ್ಯಾಯಾಂಗ ಬಂಧನ
ಸುಳ್ಯ: ರಾತ್ರಿ ವೇಳೆ ಮಹಿಳೆಯೊಬ್ಬರೇ ಇದ್ದ ಮನೆಯ ಬಾಗಿಲು ತಟ್ಟಿ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಕಲ್ಲುಗುಂಡಿ ಜನತಾ ಕಾಲೊನಿಯ ವಿಜಯ ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತ ತನ್ನ ಸಮೀಪದ ಮನೆಯ ವಿವಾಹಿತ ಮಹಿಳೆಯೊಬ್ಬರ ಮನೆಯ ಬಾಗಿಲು ತಟ್ಟಿದ್ದು, ಆಕೆ ಪೊಲೀಸರಿಗೆ ದೂರು ನೀಡಿದ್ದಳು. ವಿಜಯ ಕೂಡ ವಿವಾಹಿತನಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಯಿತು.