ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲೇಡಿಸ್ ಹಾಸ್ಟೆಲ್ ಮುಂದೆ ಅಶ್ಲೀಲ ಪ್ರದರ್ಶನ: ಯುವಕ ಸೆರೆ

Vishwanath S
Updated On : 2 Apr 2013, 11:08 am

ಮಂಗಳೂರು: ಕೊಣಾಜೆ ವಿಶ್ವವಿದ್ಯಾಲಯ ಲೇಡೀಸ್ ಹಾಸ್ಟೆಲ್ ಬಳಿ ಪ್ಯಾಂಟ್ ಜಾರಿಸಿ ಲಿಂಗ ಪ್ರದರ್ಶಿಸುತ್ತಿದ್ದ ಯುವಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನರಿಂಗಾನ ಮೋರ್ಲ ನಿವಾಸಿ ಹರೀಶ್ ಪೂಜಾರಿ (31) ಬಂಧಿತ. ಈತನಿಗೆ ಮರದಮಿಲ್.ನಲ್ಲಿ ಹೆಲ್ಪರ್ ಕೆಲಸ. ಸೋಮವಾರ ಬೆಳಗ್ಗೆ 9.15ರ ವೇಳೆಗೆ ಲೇಡೀಸ್ ಹಾಸ್ಟೆಲ್ ಬದಿಯಲ್ಲಿ ನಿಂತು ಪ್ಯಾಂಟ್ ಜಿಪ್ ಜಾರಿಸಿ ಅಶ್ಲೀಲವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ದಾರಿಹೋಕರು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.  ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಪ್ರಕರಣ ದಾಖಲಿಸಿ, ಆರೋಪಿಯನ್ನು ಕೋರ್ಟ್.ಗೆ ಹಾಜರು ಪಡಿಸಿದ್ದಾರೆ. 200 ಭದ್ರತೆ ಪಡೆದು ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement