ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸದಸ್ಯರ ಹಕ್ಕು ಕಸಿದ ಬಿಲ್ಲವ ಯೂನಿಯನ್: ಆರೋಪ

Vishwanath S
Updated On : 2 Apr 2013, 11:13 am

ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ ಸರ್ವಾಧಿಕಾರಿ ಅಧ್ಯಕ್ಷರು ಕಾನೂನು ಬಾಹಿರ ಸಭೆಗಳನ್ನು ನಡೆಸುತ್ತಿದ್ದಾರೆ. ಸ್ವಾರ್ಥಕ್ಕೆ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಬಿಲ್ಲವ ಸಂಘಟನೆಗಳ ಏಕೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಶಂಕರ ಮಿಜಾರ್ ಹೇಳಿದರು.   ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಶಾಶ್ವತ ಸೇವೆ (500) ಸಲ್ಲಿಸಿದವರು ಅಖಿಲ ಭಾರತ ಬಿಲ್ಲವರ ಯೂನಿಯನ್ ಸದಸ್ಯರಾಗುತ್ತಾರೆ. ಸಾವಿರಾರು ಮಂದಿ ಶಾಶ್ವತ ಸೇವೆ ಸಲ್ಲಿಸಿದ್ದರೂ ಸದಸ್ಯರನ್ನಾಗಿ ಮಾಡುತ್ತಿಲ್ಲ. ನಿಜವಾದ ಸದಸ್ಯರಿಗೆ ಮಹಾಸಭೆಗೆ ಆಹ್ವಾನಿಸುತ್ತಿಲ್ಲ ಎಂದು  ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.   ಇತ್ತೀಚೆಗೆ ಮಹಾಸಭೆಗೆ ಗುರುತು ಚೀಟಿ ಇದ್ದ ಸದಸ್ಯರಿಗೆ ಮಾತ್ರ ಸಭಾಂಗಣದೊಳಗೆ ಅವಕಾಶ ಮಾಡಿಕೊಡಲಾಗಿತ್ತು. ಕೇವಲ ಆಯ್ದ 300 ಮಂದಿಗೆ ಮಾತ್ರ ಗುರುತು ಚೀಟಿ ನೀಡಲಾಗಿತ್ತು. ನಾನು ಸಹಿತ ಮೂರು ಮಂದಿಗೆ ಗುರುತು ಚೀಟಿ ಇಲ್ಲದಿದ್ದರೂ ಸಭೆಗೆ ಪ್ರವೇಶಕ್ಕೆ ಅವಕಾಶ ನೀಡಿದ್ದರು. ಮಾತನಾಡಲು ನಿಲ್ಲುತ್ತಿರುವಂತೆಯೇ ಮೈಕ್ ಕಸಿದುಕೊಂಡರು. ನಮ್ಮ ಮೂವರ ಉಚ್ಛಾಟನೆ ಸಂವಿಧಾನ ಬಾಹಿರ. ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಈ ಸಭೆಯನ್ನು ಜಿಲ್ಲಾ ರಿಜಿಸ್ಟ್ರಾರ್ ಅಸಿಂಧು ಎಂದು ಘೋಷಿಸಿದ್ದಾರೆ . 3 ಸಾವಿರಕ್ಕೂ ಹೆಚ್ಚು ಯೂನಿಯನ್ ಸದಸ್ಯರು ನಮ್ಮ ಜತೆ ಇದ್ದಾರೆ. ಬಿಲ್ಲವ ಮಹಾ ಮಂಡಲ, ಬಿಲ್ಲವ ಸಂಘಟನೆಗಳ ಸದಸ್ಯರು ನಮ್ಮ ಬಳಿ ಇದ್ದಾರೆ ಎಂದರು.   ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಅಧ್ಯಕ್ಷ ಎಂ.ಸೀತಾರಾಮ್, ಕೆ.ಈಶ್ವರ ಸಾಲಿಯಾನ್, ದಿನೇಶ್  ಅಂಚನ್, ಪುರುಷೋತ್ತಮ ಪೂಜಾರಿ,  ಸುಧಾಕರ ಅಮೀನ್, ಚಂದ್ರೇಶ್, ಡಿ.ಪಿ.ದಿನಕರ್ ಇತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement