ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಚೆ ಕಡತಗಳಿಗೆ ಬೆಂಕಿ
ಮಂಗಳೂರು: ಜಿಲ್ಲಾಧಿಕಾರಿ ಕಚೇರಿ ಕಟ್ಟದಲ್ಲಿರುವ ಅಂಚೆಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಕಡತಗಳು ಸುಟ್ಟು ಹೋಗಿವೆ.
ಒಂದನೇ ಮಹಡಿಯಲ್ಲಿರುವ ಅಂಚೆ ಕಚೇರಿಗೆ ಮಧ್ಯಾಹ್ನ 12.15ಕ್ಕೆ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ದಳಕ್ಕೆ ಮಾಹಿತಿ ತಲುಪಿದ ತಕ್ಷಣ ಸ್ಥಳಕ್ಕೆ ಆಗಮಿಸಿದರು. ಕಡತಗಳಿಗೆ ಬೆಂಕಿ ಹಬ್ಬಿ ಕಚೇರಿ ಒಳಗೆ ಹೊಗೆ ದಟ್ಟವಾಗಿ ಹರಡಿತ್ತು. ಅಗ್ನಿಶಾಮಕ ದಳ ಅಧಿಕಾರಿಗಳು ಬೆಂಕಿ ನಂದಿಸಿದರು.
ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹಬ್ಬಿದ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಡಸ್ಟ್ ಬಿನ್ನಲ್ಲಿ ಬೆಂಕಿಕಾಣಿಸಿಕೊಂಡು ಬಳಿಕೆ ಟೇಬಲ್ಗೆ ಹಬ್ಬಿದೆ. ಯಾರೋ ಡಸ್ಟ್ಬಿನ್ನಲ್ಲಿ ಬೀಡಿ, ಸಿಗರೇಟ್ ರೀತಿಯ ವಸ್ತುಗಳನ್ನು ಹಾಕಿದ ಪರಿಣಾಮ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.