ಬಾಲಕಿಯರಿಬ್ಬರು ನೀರುಪಾಲು
ಸುಳ್ಯ: ಸ್ನಾನಕ್ಕೆಂದು ಹೊಳೆಗೆ ಇಳಿದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೂನಡ್ಕ ಸಮೀಪದ ದೊಡ್ಡಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ದೊಡ್ಡಡ್ಕದ ಯೂನುಸ್ ಎಂಬವರ ಪುತ್ರಿ, ರಾಜಾರಾಂಪುರ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ನಿಶಾನತ್ ಮತ್ತು ಮಹಮ್ಮದ್ ಎಂಬವರ ಪುತ್ರಿ, ಅದೇ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಮೆಹನಾಝ್ ಮೃತ ಬಾಲಕಿಯರು.