ಮಂಗಳೂರು-ದಮಾಮ್ ನೇರ ವಿಮಾನಯಾನ
ಮಂಗಳೂರು: ಮಂಗಳೂರಿನಿಂದ ಸೌದಿ ಅರೇಬಿಯಾದ ದಮಾಮ್,ಗೆ ತೆರಳುವ ಯಾನಿಗಳಿಗೆ ಬುಧವಾರದಿಂದ ನೇರ ವಿಮಾನ ಸಂಚಾರ ಆರಂಭವಾಗಿದೆ.
ಮಂಗಳೂರು - ದಮಾಮ್ ಮಧ್ಯೆ ಏರ್,ಇಂಡಿಯಾ ಎಕ್ಸ್,ಪ್ರೆಸ್ ನೇರ ಯಾನದ ಮೊದಲ ವಿಮಾನ ಸಂಜೆ 5ಕ್ಕೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಈ ವಿಮಾನ ರಾತ್ರಿ 9ಕ್ಕೆ ದಮಾಮ್ ತಲುಪುತ್ತದೆ. ಪ್ರತಿ ಬುಧವಾರ, ಶನಿವಾರ ಸಂಜೆ 4ಕ್ಕೆ ಮಂಗಳೂರಿನಿಂದ ದಮಾಮ್,ಗೆ, ಪ್ರತಿ ಗುರುವಾರ, ಭಾನುವಾರ ಮುಂಜಾನೆ 3.20ಕ್ಕೆ ದಮಾಮ್,ನಿಂದ ಮಂಗಳೂರಿಗೆ ಆಗಮಿಸಲಿದೆ. ಪ್ರಥಮ ಯಾನದ ಟಿಕೆಟ್ ನೀಡುವ ಹಸ್ತಾಂತರಿಸುವ ಮೂಲಕ ವಿಮಾನ ನಿಲ್ದಾಣ ನಿರ್ದೇಶಕ ರಾಧಾಕೃಷ್ಣ ಚಾಲನೆ ನೀಡಿದರು. ಕ್ಯಾಲಿಕಟ್,ನಿಂದ ಆಗಮಿಸಿದ ಏರ್,ಇಂಡಿಯಾ ಎಕ್ಸ್,ಪ್ರೆಸ್,ನಲ್ಲಿ 109 ಮಂದಿ ಹಾಗೂ ಮಂಗಳೂರಿನಿಂದ 56 ಮಂದಿ ಯಾನಿಗಳು ದಮಾಮ್,ಗೆ ತೆರಳಿದರು. ಈಗಾಗಲೇ ಒಂದು ತಿಂಗಳಿಗೆ ಟಿಕೆಟ್ ಬುಕ್ ಆಗಿರುವುದಾಗಿ ಏರ್,ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಶಾಸಕ ಯು.ಟಿ.ಖಾದರ್ ಮಾತನಾಡಿ, ಹಿಂದೆ ತಾನು ಸೌದಿ ಅರೇಬಿಯಾಕ್ಕೆ ಹೋಗಿದ್ದೆ. ಆಗ ಕ್ಯಾಲಿಕಟ್,ನಿಂದ ಬಹರೈನ್,ಗೆ ಹೋಗಿ, ಅಲ್ಲಿಂದ ನಾಲ್ಕು ಗಂಟೆ ರಸ್ತೆ ಮೂಲಕ ದಮಾಮ್ ತಲಪಬೇಕಿತ್ತು. ಈಗ ನೇರ ಯಾನ ಶುರುವಾದ್ದರಿಂದ ಉದ್ಯೋಗಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭ ಉಡುಪಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಜರಿದ್ದರು.