ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಾಸಕ ಖಾದರ್ ವಿರುದ್ಧ ಬಂಡಾಯ ಧ್ವನಿ

Rashmi Kasaragodu
Updated On : 4 Apr 2013, 1:06 am

ಮಂಗಳೂರು: ಮಂಗಳೂರು ಕ್ಷೇತ್ರ(ಉಳ್ಳಾಲ) ಶಾಸಕ ಯು.ಟಿ. ಖಾದರ್ ವಿರುದ್ಧ ಸ್ವಪಕ್ಷೀಯರೇ ಬಂಡಾಯ ಏಳಲು ಸನ್ನದ್ಧರಾಗಿದ್ದಾರೆ. ಖಾದರ್ ಸರ್ವಾಧಿಕಾರಿ ಹಾಗೂ ಸ್ವಜನ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಏ.5ರಂದು ಭಿನ್ನರ ಸಭೆ ಕರೆಯಲಾಗಿದೆ. ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಖಾದರ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಭಿನ್ನರು ಎಚ್ಚರಿಸಿದ್ದಾರೆ.  ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಪುರಸಭಾ ಸದಸ್ಯ ಫಾರೂಕ್ ಯು.ಎಚ್. ಮಾತನಾಡಿ, ಖಾದರ್ ವಿರುದ್ಧ 11 ಗುರುತರ ಆರೋಪಗಳಿವೆ. ಅವುಗಳಿಗೆ ಖಾದರ್ ಸ್ಪಷ್ಟ ಉತ್ತರ ನೀಡಬೇಕು. ಉಳ್ಳಾಲ ಕ್ಷೇತ್ರ ಖಾದರ್ ಹಾಗೂ ಅವರ ಕುಟುಂಬದ ಜೀತಕ್ಕೊಳಗಾಗಿದೆ. ಅಲ್ಪಸಂಖ್ಯಾತರಿಗೆ ಕೋಮವಾದಿಗಳಿಂದ ತೊಂದರೆಯಾದಾಗ, ಖಾದರ್ ಅಲ್ಪಸಂಖ್ಯಾತರ ಬೆಂಬಲಕ್ಕೆ ಬರಲಿಲ್ಲ.  ಭಿನ್ನಮತೀಯ 150 ಮಂದಿ ಏ.5ರಂದು ಸಂಜೆ 4.30ಕ್ಕೆ ತೊಕ್ಕೊಟ್ಟು ಸ್ವಾಗತ್ ಹಾಲ್‌ನಲ್ಲಿ ಸಭೆ ಸೇರಿ ಸ್ವತಂತ್ರ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗುವುದು ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement