ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರಕು ನಿರ್ವಹಣೆ: ಫಾಲ್ಘಾಟ್ ರೇಲ್ವೆ ದಾಖಲೆ

Vishwanath S
Updated On : 4 Apr 2013, 10:35 am

ಮಂಗಳೂರು: ನೈಋತ್ಯ ರೇಲ್ವೆಯ ಫಾಲ್ಘಾಟ್ ವಿಭಾಗ 2012-13ನೇ ಸಾಲಿನಲ್ಲಿ 7.068 ಮಿಲಿಯನ್ ಟನ್ ಸರಕು ಸಾಗಾಟ ಮಾಡಿ ಶೇ.32.16 ಸಾಧನೆ ದಾಖಲಿಸಿದೆ. ಹಿಂದಿನ ಅವಧಿಯಲ್ಲಿ 5.344 ಮಿಲಿಯನ್ ಟನ್ ಸರಕು ಸಾಗಾಟ ನಡೆಸಿತ್ತು. ಅದೇ ರೀತಿ 5.414 ಮಿಲಿಯನ್ ಟನ್ ಕಲ್ಲಿದ್ದಲು ಸಾಗಾಟ ಮಾಡಿ ಹಿಂದಿನ ವರ್ಷದ 2.627 ಮಿ.ಟನ್ ದಾಖಲೆಯನ್ನು ಹಿಂದಿಕ್ಕಿ ಶೇ.106 ಪ್ರಗತಿ ಕಂಡಿದೆ. ಪಣಂಬೂರು ಪ್ರದೇಶದಲ್ಲಿ 6.495 ಮಿಲಿಯನ್ ಟನ್ ಸರಕು ನಿರ್ವಹಿಸಿ ಶೇ.91.2 ಸಾಧನೆ ಮಾಡಿದೆ. ಒಟ್ಟಾರೆಯಾಗಿ ಈ ವಿಭಾಗ ರು. 878.46 ಕೋಟಿ ಆದಾಯ ಸಂಗ್ರಹಿಸಿದ್ದು, ಹಿಂದಿನ ಸಾಲಿಗಿಂತ( 665.52 ಕೋಟಿ)ಶೇ.32 ಜಾಸ್ತಿ ಆದಾಯ ಸಂಗ್ರಹವಾದಂತಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement