ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹದಗೆಟ್ಟ ಬ್ಯಾಂಕ್ ವ್ಯವಸ್ಥೆ: ಸ್ಥಳೀಯರ ಪ್ರತಿಭಟನೆ

Vishwanath S
Updated On : 4 Apr 2013, 10:35 am

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆಯ ರಾಷ್ಟ್ರೀಕೃತ ಬ್ಯಾಂಕ್,ವೊಂದರ ವ್ಯವಹಾರದ ಅಸಮರ್ಪಕತೆಯಿಂದಾಗಿ ಬ್ಯಾಂಕ್ ಪ್ರಬಂಧಕರು ಹಾಗೂ ಸಿಬ್ಬಂದಿ ವಿರುದ್ಧ ಗ್ರಾಹಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಈ ಬ್ಯಾಂಕ್ ವ್ಯವಸ್ಥೆ ಬಗ್ಗೆ ಗ್ರಾಹಕರು ದೂರುತ್ತಲೇ ಬಂದಿದ್ದಾರೆ. ತುರ್ತು ಹಣ ಪಡೆಯಲು ವ್ಯವಸ್ಥೆಗೊಳಿಸಿದ ಎಟಿಎಂ ಅಂತೂ ವಾರದ ನಾಲ್ಕು ದಿನ ಮುಚ್ಚಿರುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಶಾಖಾ ಪ್ರಬಂಧಕರಲ್ಲಿ ವಿಚಾರಿಸಿದಾಗ ಸರಿಯಾದ ಉತ್ತರ ದೊರೆಯುತ್ತಿಲ್ಲ ಎಂಬುದು ಗ್ರಾಹಕರ ಅಳಲು. ಸ್ವಸಹಾಯ ಸಂಘಗಳ ಸದಸ್ಯರು ಹಣ ಕಟ್ಟಲು ಬ್ಯಾಂಕ್,ಗೆ ಬಂದರೆ ಅವರೊಂದಿಗೆ ಸೌಜನ್ಯದಿಂದ ವರ್ತಿಸದೆ ಕೆಲಸ ಕಾರ್ಯಗಳನ್ನು ತಡವಾಗಿಸಿ ಆ ಸದಸ್ಯರು ಗಂಟೆಗಟ್ಟಲೆ ಕಾಯುವಂತೆ ಮಾಡುತ್ತಾರೆ ಎಂದು ಮಹಿಳೆಯರು ದೂರಿದ್ದಾರೆ. ಈ ಎಲ್ಲ ಕಾರಣಗಳಿಂದ ಬೇಸತ್ತ ಗ್ರಾಹಕರು ಒಗ್ಗಟ್ಟಾಗಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುವಂತೆ ಪ್ರಬಂಧಕರಲ್ಲಿ ಆಗ್ರಹಿಸಿದ್ದು, ಬ್ಯಾಂಕ್,ನ ಕೇಂದ್ರ ಕಚೇರಿಗೂ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement