ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉತ್ತಮ ರಾಜಕಾರಣಿಗಳ ಅಗತ್ಯವಿದೆ: ನಳಿನ್

Vishwanath S
Updated On : 5 Apr 2013, 11:04 am

ಮಂಗಳೂರು: ರಾಜಕೀಯದಲ್ಲಿ ಭಾರತಕ್ಕೆ ಕೊಡುಗೆ ನೀಡುವ ರಾಜಕಾರಣಿಗಳ ಅಗತ್ಯವಿದೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಕರಾವಳಿ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಕಗಳನ್ನು ಪಡೆಯುವುದು ಮಾತ್ರ ಶಿಕ್ಷಣದ ಉದ್ದೇಶವಾಗಿರದೆ, ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಶಿಕ್ಷಣ ಎಂಬುವುದು ಮಾನವೀಯ ಪರಿಕಲ್ಪನೆಯಾಗಿದ್ದು, ದೇಶದ ಕೀರ್ತಿ ಬೆಳಗುವಲ್ಲಿ ಪ್ರತಿಭಾನ್ವಿತರು ಕಾರ್ಯನಿರ್ವಹಿಸಲಿ ಎಂದರು.
ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪನಾಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ಮಕ್ಕಳಿಂದ ಶಿಕ್ಷಣಕ್ಕಾಗಿ ಪಡೆದ ಹಣವನ್ನು ಶಿಕ್ಷಣದ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಕಾಲೇಜುಗಳ ನವೀಕರಣಕ್ಕಾಗಿ ರು. 5ಕೋಟಿ ಮೀಸಲಿಡಲಾಗಿದ್ದು, ಮುಂದಿನ ವರ್ಷ 2 ಸ್ನಾತಕೋತ್ತರ ಪದವಿ ಮತ್ತು 3 ಉನ್ನತ ಶಿಕ್ಷಣ ಅಧ್ಯಯನ ತೆರೆಯಲಾಗುವುದು ಎಂದರು.
ಕಾಲೇಜಿನಿಂದ ರಾಜ್ಯ ವಿವಿಧ ಭಾಗಗಳಿಗೆ ತೆರಳಿ ಕಾರ್ಯಕ್ರಮಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement