ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಡಿನಲ್ಲಿ ನೂತನ ರಸ್ತೆ ನಿರ್ಮಾಣ ಕಾನೂನು ಬಾಹಿರ: ಶಿವರಾಮ ರೈ

Vishwanath S
Updated On : 5 Apr 2013, 11:04 am

ಸುಬ್ರಹ್ಮಣ್ಯ: ವಲಯಾರಣ್ಯಾಧಿಕಾರಿ ಕಚೇರಿಯ ಹಿಂಬದಿಯಿಂದ ಕೋಡಿಕಜೆಗೆ ಸುರಕ್ಷಿತ ಕಾಡಿನಲ್ಲಿ ರಸ್ತೆ ನಿರ್ಮಾಣ ಮಾಡಿರುವುದು ಕಾನೂನು ಬಾಹಿರವಾಗಿದೆ. ಸುಬ್ರಹ್ಮಣ್ಯದಿಂದ ಕಲ್ಲಜಡ್ಕ ಮುಖಾಂತರ ಬಹಳ ಹಿಂದಿನಿಂದ  ಐನೆಕಿದು ಗ್ರಾಮಕ್ಕೆ ರಸ್ತೆ ಸಂಪರ್ಕವಿದ್ದು, ಕಳೆದ ವರ್ಷ 2 ಲಕ್ಷ ಅನುದಾನ ಇರಿಸಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ. ಉಪಾಧ್ಯಕ್ಷ ಶಿವರಾಮ ರೈ ಹೇಳಿದರು.
ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿನ ನೂತನ ರಸ್ತೆ ಸಮಸ್ಯೆ ಕುರಿತಾಗಿ ಪತ್ರಿಕಾ ಹೇಳಿಕೆ ನೀಡಿದ ಅವರು, ಕೋಡಿಕಜೆ - ಕಲ್ಲಜಡ್ಕ ರಸ್ತೆಯು ವಾಹನ ಸಂಚಾರಕ್ಕೆ ಅನುಕೂಲವಿರುವ ರಸ್ತೆಯಾಗಿದೆ. ಈಗಾಗಲೇ ಇಲ್ಲಿ ಕಾಲು ಸೇತುವೆ, ವಿದ್ಯುತ್ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗಿದೆ.
ಅಲ್ಲದೆ ಅಗರಿಕಜೆ- ಕುಡ್ತಡ್ಕ- ಮಾನಾಡು- ಐನೆಕಿದು ರಸ್ತೆಯು ಈಗಾಗಲೇ 5 ಅಡಿ ಇದ್ದು, ಅದನ್ನು ಭೂಸ್ವಾಧೀನ ಮಾಡಿ 12 ಅಡಿ ರಸ್ತೆಯನ್ನಾಗಿ ಮಾಡುವ ಕಾರ್ಯಕ್ಕೆ ರು. 1 ಲಕ್ಷ ಅನುದಾನವನ್ನು ಗ್ರಾ.ಪಂ. ಇರಿಸಿ, ಈ ಬಗ್ಗೆ ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಇದೀಗ ಕೆಲವರು ರಾಜಕೀಯ ಕಾರಣ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತಗಳಿಸುವ ದೃಷ್ಟಿಯನ್ನು ಮುಂದಿಟ್ಟು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ಅತ್ಯಂತ ಹತ್ತಿರದ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ವಿಫಲಗೊಳಿಸಲು ಪ್ರಯತ್ನಪಡುತ್ತಾ, ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಲಾಭಗಳಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement