ಕೊಣಾಜೆ ಪುತ್ತಿಗೆಯಲ್ಲಿ ಚುನಾವಣೆ ಬಹಿಷ್ಕಾರ
ಕನ್ನಡಪ್ರಭ ವಾರ್ತೆ, ಉಪ್ಪಿನಂಗಡಿ, ಏ. 4-
ಇಲ್ಲಿನ ಕೊಣಾಜೆ ಪುತ್ತಿಗೆ ಗ್ರಾಮಸ್ಥರಿಗೆ ರಸ್ತೆಯೂ ಇಲ್ಲ, ನಳ್ಳಿ ಇದ್ದರೂ ನೀರಿಲ್ಲ.. ಹಲವಾರು ಭಾಗಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ! ಇಷ್ಟೆಲ್ಲ ಸಮಸ್ಯೆಗಳನ್ನು ಅನುಭವಿಸುವಂತೆ ಮಾಡಿದ ರಾಜಕಾರಣಿಗಳ ಗಮನ ಸೆಳೆಯಲು ಇಲ್ಲಿನ ಗ್ರಾಮಸ್ಥರು ಈಗ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
15 ವರ್ಷಗಳ ಹಿಂದೆ ಗುಂಡ್ಯ ಹೊಳೆಗೆ ನಿರ್ಮಾಣವಾದ ತೂಗು ಸೇತುವೆ ಈ ಭಾಗದ ಜನತೆಗೆ ಆಶಾಕಿರಣವಾಗಿತ್ತು. ಇದೀಗ ಸಮರ್ಪಕ ನಿರ್ವಹಣೆ ಇಲ್ಲದೆ ಇದ್ದ ಸೇತುವೆಯೂ ಅಪಾಯಕಾರಿಯಾಗಿದೆ. ಹೀಗಾಗಿ ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬರಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿದ್ಯುತ್: ಸಂವಾದ ಸಭೆ
ರಾಮನಗರ: ಬೆಸ್ಕಾಂನಿಂದ ಏ.8ರ ಮಧ್ಯಾಹ್ನ 3ಕ್ಕೆ ಬಿಡದಿಯ ಬಾನಂದೂರು ರಸ್ತೆಯಲ್ಲಿರುವ ಟಿಸಿಎಚ್ ಕಾಲೇಜು ಎದುರಿನ ಛತ್ರದಲ್ಲಿ ಬಿಡದಿ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕ ಸಂವಾದ ಸಭೆ ಕರೆಯಲಾಗಿದೆ. ಬಿಡದಿ ಉಪವಿಭಾಗ ವ್ಯಾಪ್ತಿಯ ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಈ ಸಭೆಯಲ್ಲಿ ಸಲ್ಲಿಸಬಹುದು.