ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ ಬೊಬ್ಬೆಕೇರಿ ಸರ್ಕಾರಿ ಶಾಲಾ ಶತಮಾನೋತ್ಸವ

Vishwanath S
Updated On : 5 Apr 2013, 11:06 am

ಪುತ್ತೂರು: 1905ರಲ್ಲಿ ಆರಂಭಗೊಂಡು ಇದೀಗ ಶತಮಾನೋತ್ಸವ ಹಂತದಲ್ಲಿರುವ ಬೊಬ್ಬೆಕೇರಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಶತಮಾನೋತ್ಸವ- 2013 ಕಾರ್ಯಕ್ರಮ ಎ.6ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶತಮಾನೋತ್ಸವಕ್ಕೆ ಪೂರ್ವಾಹ್ನ ಕಾಣಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಘವ ಗೌಡ ಚಾಲನೆ ನೀಡಲಿದ್ದಾರೆ. ನಿವೃತ್ತ ಭೂಸೇನಾ ಅಧಿಕಾರಿ ರವೀಂದ್ರ ಮರಕ್ಕಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎ. ಬಹುಮಾನ ವಿತರಣೆ ಮಾಡಲಿದ್ದಾರೆ. ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಯಶೋದಾ ರಾಮಚಂದ್ರ ಪ್ರಧಾನ ಭಾಷಣ ಮಾಡಲಿದ್ದಾರೆ.
ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸುದಾನ ಶಾಲಾ ಸಂಚಾಲಕ ವಿಜಯ ಉದ್ಘಾಟಿಸಲಿದ್ದಾರೆ. ನಿಂತಿಕಲ್ಲು ಕೆ.ಎಸ್. ಹೆಗ್ಡೆ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಬಿಅರ್ಸಿಯ ಸಮನ್ವಯಾಧಿಕಾರಿ ನಂದೀಶ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಾಣಿಯೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎನ್. ಕೃಷ್ಣ ಭಟ್ ಸಾಧಕರನ್ನು ಸನ್ಮಾನಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ಸಂಸ್ಕೃತಿ ಉಪನ್ಯಾಸಕ ಡಾ. ಶ್ರೀಶಕುಮಾರ್ ಎಂ.ಕೆ. ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಸಾಧಕರಾದ ಧ್ರುವ ಕಂಜರ್ಪಣೆ, ಡಾ. ಕುಶಾಲಪ್ಪ ಗೌಡ ಅಭಿಕಾರ್, ದಾಮೋದರ ಗೌಡ ಬೊಬ್ಬೆಕೇರಿ, ಡಾ. ಕುಸುಮಾಧರ ಬೊಬ್ಬೆಕೇರಿ, ರವೀಂದ್ರ ಮರಕ್ಕಡ, ಗಿರೀಶ್ ಕಡೀರ, ಮಹೇಶ್, ಉದಯಕುಮಾರ್ ಭಟ್, ಗಣೇಶ ಮೋಂಟಪಾದೆ ಮತ್ತು ನಾರಾಯಣ ಗೌಡ ಹುದೇರಿ ಇವರನ್ನು ಸನ್ಮಾನಿಸಲಾಗುವುದು ಎಂದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ನಾವೂರು, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಗೌಡ, ಗೌರವ ಸಲಹೆಗಾರ ಸಂಜೀವ ರೈ. ಅಧ್ಯಾಪಕ ಜಯಂತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement