ಫುಟ್ಪಾತ್ನಲ್ಲಿ ಸಿಲುಕಿದ ಲಾರಿ: ಸಂಚಾರ ಅಸ್ತವ್ಯಸ್ತ
ಬಂಟ್ವಾಳ: ಸ್ಲಾಬ್ ಕಳಚಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬಿ.ಸಿ.ರೋಡಿನ ರೇಲ್ವೆ ಮೇಲ್ಸೆತುವೆಯ ಪುಟ್ಪಾತ್ನಲ್ಲಿ ಲಾರಿಯೊಂದು ಸಿಲುಕಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆಯಿತು. ಇದರಿಂದಾಗಿ ಕೆಲ ಕಾಲ ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ಯವ್ಯಸ್ತಗೊಂಡಿತು.
ಹಳೆಕಾಲದ ರೇಲ್ವೆ ಮೇಲ್ಸೆತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಇದರ ಮೇಲೆ ಪಾದಚಾರಿಗಳು ಸಂಚರಿಸುವ ಪುಟ್ಪಾತ್ನ ಸ್ಲಾಬ್ಗಳು ದಿನಕ್ಕೊಂದರಂತೆ ಕಳಚಿ ಬೀಳುತ್ತಿತ್ತು. ಇದರಿಂದಾಗಿ ಪಾದಚಾರಿಗಳು ಹಾಗೂ ರಾತ್ರಿ ವೇಳೆ ಪ್ರಯಾಣಿಸುವ ವಾಹನ ಚಾಲಕರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಸಾರ್ವಜನಿಕರೇ ಇಲ್ಲಿನ ಅಪಾಯದ ತೀವ್ರತೆಯನ್ನು ಅರಿತುಕೊಂಡು ಮರದ ಗೆಲ್ಲುಗಳನ್ನು ಅಡ್ಡ ಇಟ್ಟು ಎಚ್ಚರಿಕೆಯ ಫಲಕ ಹಾಕಿದ್ದರು.
ಗುರುವಾರ ಬೆಳಗ್ಗೆ ಮಂಗಳೂರು ಕಡೆಯಿಂದ ಬಂದ 40ಕ್ಕಿಂತಲೂ ಹೆಚ್ಚು ಟನ್ ಭಾರ ಹೊತ್ತ ಲಾರಿಯೊಂದು ಸೇತುವೆಯಲ್ಲಿ ಸಂಚರಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲೆ ಸಾಗಿ ಪುಟ್ಪಾತ್ನ ಸಿಮೆಂಟ್ ಸ್ಲಾಬ್ಗಳು ಕುಸಿದು ಬಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.