ವಿಜಯ್ ಜೋಶಿ ಎಂಆರ್ಪಿಎಲ್ ನಿರ್ದೇಶಕ
ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್ಪಿಎಲ್) ಪ್ರಥಮ ನಿರ್ದೇಶಕರಾಗಿ ವಿಜಯ್ ಜಿ. ಜೋಶಿ ಸೇರ್ಪಡೆಯಾಗಿದ್ದಾರೆ. ಇವರು ಎಂಆರ್ಪಿಎಲ್ ಕಾರ್ಯಕಾರಿ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. 58 ವರ್ಷದ ವಿಜಯ್ ಜೋಶಿ ಪೆಟ್ರೋಲಿಯಂ ರಿಫೈನಿಂಗ್ ಇಂಡಸ್ಟ್ರಿಯಲ್ಲಿ 36 ವರ್ಷ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಎಂಆರ್ಪಿಎಲ್ ಯೋಜನಾ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದರು. ಇವರು ಮೂಲತಃ ಬಿಜಾಪುರ ಜಿಲ್ಲೆಯವರಾಗಿದ್ದು, 1975ರಲ್ಲಿ ಸುರತ್ಕಲ್ ಎನ್ಐಟಿಕೆ ವಿದ್ಯಾರ್ಥಿ. ಮುಂಬೈ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದು ಭಾರತೀಯ ತೈಲ ಕಂಪನಿಯಲ್ಲಿ ಸೇರಿಕೊಂಡರು.