ಶ್ರೀದೇವಿ ಕಾಲೇಜಿಗೆ ಎರಡು ಕೋರ್ಸ್ ಸೇರ್ಪಡೆ
ಮಂಗಳೂರು: ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ 2013-14ನೇ ಸಾಲಿನಲ್ಲಿ ಎರಡು ಎಂ-ಟೆಕ್ ಕೋರ್ಸುಗಳ ಸೇರ್ಪಡೆಗೆ ದಿಲ್ಲಿಯ ಎಐಸಿಟಿಇನಿಂದ ಅನುಮತಿ ದೊರಕಿದೆ. ಕಂಪ್ಯೂಟರ್ ನೆಟ್ವರ್ಕ್ ಎಂಜಿನಿಯರಿಂಗ್ ಮತ್ತು ವಿಎಲ್ಎಸ್ಐ ಡಿಸೈನ್ ಮತ್ತು ಎಂಬೆಡೆಡ್ ಸಿಸ್ಟಮ್ ಎಂಬ ಎರಡು ವಿಷಯಗಳಿಗೆ ಎಂ-ಟೆಕ್ ಕೋರ್ಸು ಪ್ರಾರಂಭಿಸಲಾಗುವುದು. ಈಗಾಗಲೇ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಹಾಗೂ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಎಂಟೆಕ್ ಕೋರ್ಸು ಆರಂಭಗೊಂಡಿರುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.