'ಸೈಬರ್ ಕ್ರೈಂ ದೇಶದ ಭದ್ರತೆಗೆ ಅಪಾಯ'
ಮಂಗಳೂರು: ಸೈಬರ್ ಅಪರಾಧಗಳು ಕೇವಲ ವ್ಯಕ್ತಿಗೆ ಸೀಮಿತವಾಗಿಲ್ಲ, ದೇಶದ ಭದ್ರತೆ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ. ಸೈಬರ್ ಅಪರಾಧ ಅತಿ ವೇಗವಾಗಿ ಹೆಚ್ಚುತ್ತಿದ್ದು, ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂದು ನ್ಯಾಯವಾದಿ ಸತೀಶ್ ಯಡಪಡಿತ್ತಾಯ ಹೇಳಿದರು.
ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಲ್ಲಿ ವಾಣಿಜ್ಯ ವಿಭಾಗ ಗುರುವಾರ ಆಯೋಜಿಸಿದಸೈಬರ್ ಅಪರಾಧ ಮತ್ತು ನೈತಿಕತೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನಕ್ಕೆ ನೆರವಾಗುವ ಅಂತರ್ಜಾಲದಿಂದ ಒಳಿತಿನಷ್ಟೇ ಕೆಡುಕು ಆಗುತ್ತಿದೆ. ಯುವ ಸಮೂಹ ದುರ್ಬಳಕೆ ಮಾಡುತ್ತಿದೆ. ಬ್ಯಾಂಕ್ ವ್ಯವಹಾರ ಸಹಿತ ಅನೇಕ ಹಣಕಾಸು ವಹಿವಾಟು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಪಾಸ್ವರ್ಡ್ ಹ್ಯಾಕ್ ಮಾಡುವ ವೃತ್ತಿಪರ ಪರಿಣಿತ ಚೋರರ ತಂಡವೇ ಕಾರ್ಯಾಚರಿಸುತ್ತಿದೆ ಎಂದರು.
ಪ್ರಾಂಶುಪಾಲ ಡಾ.ಬಿ.ಗಂಗಾಧರ್, ನ್ಯಾಯವಾದಿ ವಸಂತ ಕಾರಂದೂರು, ಶ್ರೀವೆಂಕಟೇಶ್ ಶಿವಭಕ್ತ ಯೋಗ ಸಂಘ ಅಧ್ಯಕ್ಷ ಬಿ.ದೇವದಾಸ್ ಮತ್ತಿತರರು ಇದ್ದರು.