ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆ: ಉದಯ್ ವಿಟ್ಲ ದ್ವಿತೀಯ

Vishwanath S
Updated On : 6 Apr 2013, 12:27 pm

ಬಂಟ್ವಾಳ: ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ವ್ಯಂಗ್ಯಚಿತ್ರ ಸ್ಪರ್ಧೆ 'ಮಾಯಾ ಕಾಮತ್ ಮೆಮೋರಿಯಲ್ ಪೊಲಿಟಿಕಲ್ ಕಾರ್ಟೂನ್ ಕಾಂಪಿಟೀಷನ್- 2013' ಇದರಲ್ಲಿ ಉದಯ್ ವಿಟ್ಲ ಅವರ 'ಡೆತ್ ಪೆನಾಲ್ಟಿ ಫಾರ್ ಕಸಬ್‌' ಎಂಬ ಶೀರ್ಷಿಕೆಯ ವ್ಯಂಗ್ಯಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.
 ಬೆಂಗಳೂರು ಮಾಯಾ ಕಾಮತ್ ಮೆಮೋರಿಯಲ್ ಟ್ರಸ್ಟ್ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ದೇಶ ವಿದೇಶಗಳಿಂದ ಸುಮಾರು 125 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯ ನೇತೃತ್ವವನ್ನು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನ್ ಸಂಸ್ಥೆ- ಬೆಂಗಳೂರು ವಹಿಸಿಕೊಂಡಿತ್ತು.
ತೀರ್ಪುಗಾರರಾಗಿ ಖ್ಯಾತ ಕಲಾವಿದ ಯಸ್.ಜಿ. ವಾಸುದೇವ, ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಪಕ ಗಿರೀಶ್ ಕಾರ್ನಡ್ ಮತ್ತು ಖ್ಯಾತ ವ್ಯಂಗ್ಯಚಿತ್ರಗಾರರಾದ ಗುಜ್ಜಾರಪ್ಪ ಭಾಗವಹಿಸಿದ್ದರು. ಈ ಸ್ಪರ್ಧೆಯ ಬಹುಮಾನ ವಿತರಣೆ ಜೂ. 8 ರಂದು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನ್ ಸಂಸ್ಥೆಯ ಆಡಿಟೋರಿಯಮ್‌ನಲ್ಲಿ ನಡೆಯಲಿದೆ.
ಉದಯ್ ವಿಟ್ಲ ಇವರು ಸೇರಾಜೆ ಲಕ್ಷ್ಮೀಶ ಭಟ್ ಮತ್ತು ವಿಜಯಲಕ್ಷ್ಮೀ ದಂಪತಿ ಪುತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement