ಕರ್ಣಾಟಕ ಬ್ಯಾಂಕ್: ನಾಲ್ವರಿಗೆ ಎಜಿಎಂ ಬಡ್ತಿ
ಮಂಗಳೂರು: ಕರ್ಣಾಟಕ ಬ್ಯಾಂಕ್ನ ನಾಲ್ವರು ಡೆಪ್ಯೂಟಿ ಜನರಲ್ ಮ್ಯಾನೇಜರ್ಗಳಿಗೆ ಸಹಾಯಕ ಜನರಲ್ ಮ್ಯಾನೇಜರಾಗಿ ಬಡ್ತಿ ನೀಡಲಾಗಿದೆ. ಜಿಡಿಎಂಗಳಾದ ಮುರಳೀಧರ್ ಕೃಷ್ಣ ರಾವ್, ನಾಗರಾಜ ರಾವ್, ವೆಂಕಪ್ಪಯ್ಯ ಮತ್ತು ರುದ್ರಯ್ಯ ಬಡ್ತಿ ಪಡೆದವರು.
ಮುರಳೀಧರ ಕೃಷ್ಣ ರಾವ್ 1991ರಲ್ಲಿ ಬ್ಯಾಂಕಿಗೆ ಸೇರ್ಪಡೆಯಾಗಿದ್ದು ಚೆನ್ನೈನ ಕೇಂದ್ರ ಕಚೇರಿಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ 2004ರಲ್ಲಿ ಮುಖ್ಯ ಮ್ಯಾನೇಜರಾಗಿ, 2010ರಲ್ಲಿ ಎಜಿಎಂ ಆಗಿ ಹೊಸದಿಲ್ಲಿ ಶಾಖೆಗೆ ವರ್ಗವಾದರು. ಪ್ರಸ್ತುತ ಬಡ್ತಿ ಹೊಂದಿ ಖಜಾನೆ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದಾರೆ.
ನಾಗರಾಜ ರಾವ್ 1984ರಲ್ಲಿ ಬ್ಯಾಂಕಿಗೆ ಸೇರ್ಪಡೆಯಾಗಿದ್ದು ಚೆನ್ನೈ, ಬೆಂಗಳೂರು, ಗೋವಾಗಳಲ್ಲಿ ಕಾರ್ಯನಿರ್ವಹಿಸಿದ್ದರು. 2007ರಲ್ಲಿ ಮುಖ್ಯ ಮ್ಯಾನೇಜರಾಗಿ, 2010ರಲ್ಲಿ ಎಜಿಎಂ ಆಗಿ ಈಗ ಮುಂಬೈ ಕಾರ್ಪೊರೇಟ್ ಶಾಖೆಯ ಮುಖ್ಯಸ್ಥರಾಗಿದ್ದರು. ವೆಂಕಪ್ಪಯ್ಯ 1982ರಲ್ಲಿ ಸೇರ್ಪಡೆಯಾಗಿ ಮುಂಬೈ, ಮಂಗಳೂರುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
2002ರಲ್ಲಿ ಮುಖ್ಯ ಮ್ಯಾನೇಜರ್, 2008ರಲ್ಲಿ ಎಜಿಎಂ ಆಗಿ ದೆಹಲಿ, ಬೆಂಗಳೂರುಗಳಲ್ಲಿದ್ದು ಈಗ ಐಎಸ್ ಅಡಿಟ್ ಮತ್ತು ತಪಾಸಣಾ ವಿಭಾಗ ಮುಖ್ಯಸ್ಥ. 1976ರಲ್ಲಿ ಬ್ಯಾಂಕಿಗೆ ಸೇರ್ಪಡೆಯಾದ ರುದ್ರಯ್ಯ ಬೆಂಗಳೂರಿನ ವಿವಿಧ ಶಾಖೆಗಳಲ್ಲಿದ್ದರು.