ಕಾರಿಗೆ ಲಾರಿ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು
ಕ.ಪ್ರ.ವಾರ್ತೆ, ಅಂಕೋಲಾ, ಏ.5
ಮಾರುತಿ ಝೆನ್ ಕಾರು ಮತ್ತು ಲಾರಿ ನಡುವೆ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟ ದುರ್ಘಟನೆ ತಾಲೂಕಿನ ಅಗಸೂರು ಸಮೀಪದ ಸರಳೇಬೈಲ್ನಲ್ಲಿ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಿವೃತ್ತ ಪಿಎಸ್ಐ, ಕಾರವಾರ ವೈಲ್ಮಕ್ಕೇರಿಯ ವಿಶ್ವನಾಥ ಪುತ್ತು ನಾಯ್ಕ (62), ಪತ್ನಿ ಸವಿತಾ (58), ಮೊಮ್ಮಗ ವೈಲವಾಡ ಖಾರ್ಗೆಯ ಸಂಪ್ರೀತ ನಾಯ್ಕ (3) ಮತ್ತು ನಾದಿನಿ ಸದಾಶಿವಗಡದ ಶೋಭಾ ಕದಂ (56) ಮೃತಪಟ್ಟಿದ್ದಾರೆ. ವಿಶ್ವನಾಥ್, ಸವಿತಾ ಹಾಗೂ ಸಂಪ್ರೀತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಶೋಭಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬೊಂಬೊಲಿಂ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.