ಖೋಟಾನೋಟು ಚಲಾವಣೆ ಯತ್ನ: 7 ವರ್ಷ ಕಠಿಣ ಸಜೆ
ಮಡಿಕೇರಿ: ಖೋಟಾ ನೋಟು ಚಲಾವಣೆ ಮಾಡಲು ಪ್ರಯತ್ನಿಸಿದ ಇಬ್ಬರು ಆರೋಪಿಗಳಿಗೆ ಕೊಡಗು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಂಡ ಸಹಿತ 7 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಕುಶಾಲನಗರ ಬಳಿಯ ಬೈಚನಳ್ಳಿ ಗ್ರಾಮದ ಕುಶಾಲನಗರ-ಮೈಸೂರು ಮುಖ್ಯ ರಸ್ತೆಯ ಬಳಿಯ ಕ್ಯಾಂಟೀನ್ ಬಳಿ 2006ರ ಸೆ.2ರ ಬೆಳಗ್ಗೆ 11ಕ್ಕೆ ಬೆಳ್ಳಾರೆ ಗ್ರಾಮದ ಮರ ವ್ಯಾಪಾರಿ ಬಿ.ಎಂ.ಮೊಹಮ್ಮದ್ ಹನೀಫ್ ಯಾನೆ ಹನೀಫ್ ಮತ್ತು ಬ್ಯಾಡಗೊಟ್ಟದ ಡಿ.ಎ. ಅಬ್ದುಲ್ ಲತೀಫ್ ಎಂಬವರು ಖೋಟಾ ನೋಟು ಚಲಾವಣೆಗೆ ಪ್ರಯತ್ನಿಸುತ್ತಿದ್ದರು. ಖಚಿತ ಸುಳಿವಿನ ಆಧಾರದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.