ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

Vishwanath S
Updated On : 6 Apr 2013, 12:26 pm

ಕಾಪು: ಇಲ್ಲಿನ ಉಳಿಯಾರಗೋಳಿ ಗ್ರಾಮದ ಸಸಿತೋಟ ಎಂಬಲ್ಲಿ ಕಾಣೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪಾಂಗಾಳ ನದಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ರಾಧಿಕಾ (35), ಈಕೆ ಇಲ್ಲಿನ ನಿವಾಸಿ ರಾಜೇಶ್ ಎಂಬವರ ಅಕ್ಕ, ಏ. 1ರಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಗುರುವಾರ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬ್ಯಾರಿತೋಟ ಎಂಬಲ್ಲಿ ಪಾಂಗಾಳ ಹೊಳೆಯಲ್ಲಿ ಅವರ ಶವ ಪತ್ತೆಯಾಗಿದೆ.
ಅವರು 4 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು, ಔಷಧ ಮಾಡಿಸಿದರೂ ಗುಣವಾಗಿರಲಿಲ್ಲ. ಆಕೆಗೆ ಹೊಳೆಯಲ್ಲಿ ತೇಲಿ ಬರುವ ತೆಂಗಿನಕಾಯಿ ಹೆಕ್ಕುವ ಅಭ್ಯಾಸ ಇದ್ದುದರಿಂದ ಏ. 1ರಂದು ಮನೆಯ ಬಳಿಯ ಕೈಪುಂಜಾಲು ಹೊಳೆಯಲ್ಲಿ ತೆಂಗಿನ ಕಾಯಿ ಹೆಕ್ಕಲು ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರೇಕು ಎಂದು ರಾಜೇಶ್ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement