ರಾಮಮಂದಿರ ನಿರ್ಮಾಣ ಶತಸ್ಸಿದ್ಧ
ಗಂಗಾವತಿ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸುವುದು ಶತಸ್ಸಿದ್ಧ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣಭಾಯಿ ತೊಗಾಡಿಯ ಹೇಳಿದರು. ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ಅವರು ಆಂಜನೇಯನ ದರ್ಶನ ಪಡೆದು ಪತ್ರಕರ್ತರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣದ ಆಂದೋಲನ ರಾಜಕೀಯ ಆಂದೋಲನವಲ್ಲ. ಅದು ಧಾರ್ಮಿಕ ಆಂದೋಲನ. ಈ ಹಿಂದೆ ರಾವಣ ರಾಕ್ಷಸನಂತಿದ್ದ. ಈಗ ದೇಶದಲ್ಲಿ ಜಿಹಾದಿ ರಾಕ್ಷಸರು ಹೆಚ್ಚಾಗಿದ್ದು, ಸರ್ವನಾಶ ಮಾಡಲು ಹೊರಟಿದ್ದಾರೆ. ಇಂಥವರನ್ನು ನಾಶ ಮಾಡಲು ಹಿಂದುಗಳಿಗೆ ದೇವರು ಶಕ್ತಿ ನೀಡಬೇಕೆಂದರು. ಕರ್ನಾಟಕದಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಬೇಕು. ಪ್ರಸ್ತುತ ಚುನಾವಣೆಯಲ್ಲಿ ಯಾವುದೇ ಪಕ್ಷದವರು ಹಿಂದುಗಳನ್ನು ನಿರ್ಲಕ್ಷಿಸಬಾರದೆಂದರು.