9ರಿಂದ ನಾಟಕ ಪ್ರದರ್ಶನ
ಮಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು (ರಿ), ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ಇವರು ಶ್ರೀ ಶಿವಕುಮಾರ ಕಲಾಸಂಘ, ಸಾಣೇಹಳ್ಳಿ, ಚಿತ್ರದುರ್ಗ ಜಿಲ್ಲೆ ಇವರ ಶಿವಸಂಚಾರ 12ರ ಮೂರು ನಾಟಕಗಳಾದ ಕಳ್ಳರೋ... ಬಲುಗಳ್ಳರೋ , ಸೂಳೆ ಸನ್ಯಾಸಿ, ಸದಾರಮೆ ಗಳನ್ನು ಆಯೋಜಿರುತ್ತಾರೆ. ನಾಟಕಗಳನ್ನು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಏಪ್ರಿಲ್ 9, 10 ಮತ್ತು 11 ಏಪ್ರಿಲ್ 2013 ಗಳಂದು ಕ್ರಮವಾಗಿ ಆಯೋಜಿಸಲಾಗಿದೆ ಎಂದು ಆಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್. ಶಂಕರ್ ತಿಳಿಸಿದ್ದಾರೆ.