ಇಂದು ಮತದಾರರ ಜಾಗೃತಿ
ಮಂಗಳೂರು: ಮತದಾರರ ಜಾಗೃತಿ ಆಂದೋಲನ ಅಂಗವಾಗಿ 7ರಂದು ಬೆಳಗ್ಗೆ 10ಕ್ಕೆ ಬಂಟ್ವಾಳದ ಕುರ್ನಾಡು ಮತ್ತು ಬಾಳೆಪುಣಿ ಗ್ರಾ.ಪಂ.ಯ ಮುಡಿಪಿನಲ್ಲಿ ಮತದಾರರ ಜಾಗೃತಿಗೆ ಜಾಥಾ ನಡೆಯಲಿದೆ. ಗ್ರಾಮ ವಿಕಾಸ ಕೇಂದ್ರಗಳ ಪ್ರೇರಕರು, ಆದಿವಾಸಿ ಸಮುದಾಯದ ಕಲಾವಿದರು ಭಾಗವಹಿಸುವರು.
ಇಂದು ಸತ್ಯನಾರಾಯಣಪೂಜೆ
ಸುಬ್ರಹ್ಮಣ್ಯ: ಮಹಾಮ್ಮಾಯಿ ಮರಾಠಿ ಸಮಾಜ ಸೇವಾ ಸಂಘ ಹರಿಹರ, ಪಲ್ಲತ್ತಡ್ಕ ವತಿಯಿಂದ 7ರಂದು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಳದ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ನಡೆಯಲಿದೆ.
ಬಂದೂಕು ಒಪ್ಪಿಸಲು ಸೂಚನೆ
ಸುಬ್ರಹ್ಮಣ್ಯ: ಚುನಾವಣಾ ಹಿನ್ನೆಲೆಯಲಿ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿದ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಕೂಡಲೇ ಒಪ್ಪಿಸಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.