ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಕಡ್ಡಾಯವಾಗಲಿ: ಪ್ರೊ. ವಿಠಲ ಹೆಗ್ಡೆ

Vishwanath S
Updated On : 7 Apr 2013, 11:47 am

ಮಂಗಳೂರು: ನಗರ ಪ್ರದೇಶದಲ್ಲಿ ನೀರು ಸಂರಕ್ಷಿಸಬೇಕಾದರೆ ಪ್ರತಿಯೊಂದು ಮನೆಯಲ್ಲೂ ಮಳೆ ನೀರು ಕೊಯ್ಲು ಕಡ್ಡಾಯವಾಗಬೇಕು ಎಂದು ಎನ್‌ಐಟಿಕೆ ಅಪ್ಲಾಯ್ಡ್ ಮೆಕ್ಯಾನಿಕ್ಸ್ ಆ್ಯಂಡ್ ಹೈಡ್ರಾಲಿಕ್ಸ್ ವಿಭಾಗದ ಪ್ರೊ.ಎ. ವಿಠಲ ಹೆಗ್ಡೆ ಹೇಳಿದ್ದಾರೆ.
 ಕೊಡಗು, ದ.ಕ., ಉಡುಪಿ ಎಂಜಿನಿಯರ್ಸ್ ಸಂಘದ ವತಿಯಿಂದ ಶನಿವಾರ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ 'ಜಲ ನಿರೋಧಕ ಮತ್ತು ಜಲ ಕೊಯ್ಲು' ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕೈಗಾರಿಕೆಗಳ ಹೆಚ್ಚಳದಿಂದ ವಾತಾವರಣದಲ್ಲಿ ಇಂಗಾಲ ಹೆಚ್ಚಾಗಿದ್ದು, ಅಧಿಕ ತಾಪಮಾನದಿಂದ ನೀರಿನ ಅಂಶ ಕಡಿಮೆಯಾಗುತ್ತಿದೆ. ಪ್ರತಿಯೊಂದು ಮನೆಯಲ್ಲೂ ಶೇ. 45 ದಿನನಿತ್ಯದ ಬಳಕೆಗೆ ನೀರಿನ ಅಗತ್ಯವಿದೆ. ಉಳಿದ ಶೇ. 55 ನೀರನ್ನು ತೋಟ, ಮಣ್ಣಿಗೆ ಸೇರುವ ಬದಲು ಕೊಯ್ಲು ಮೂಲಕ ಸಂರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.
ಎನ್‌ಐಟಿಕೆ ಪ್ರೊ. ಲಕ್ಷ್ಮಣ್ ನಂದಗಿರಿ, ಕೆರೊಕೋಲ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಹೇಮನಾಥ್ ಕೆ. ಜೈನ್ ಮಾತನಾಡಿದರು.
ಸಂಘದ ಅಧ್ಯಕ್ಷ ಎಚ್.ವಿ. ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ.ಎಸ್. ಹರಿ, ಡಾ. ಗಿರೀಶ್ ಕುಮಾರ್, ಎ.ವಿಷ್ಣು ಭಟ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement