ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರೇಯಸಿ ಪತಿಯ ಕೊಂದವಗೆ ಜೀವಾವಧಿ ಶಿಕ್ಷೆ

Vishwanath S
Updated On : 7 Apr 2013, 11:41 am

ಮಂಗಳೂರು: ಪ್ರೇಯಸಿಯ ಪತಿಯನ್ನು ಕೊಲೆಗೈದ ಆರೋಪಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಹುಬ್ಬಳ್ಳಿ ಮೂಲದ ಬಸಪ್ಪ ಐಹೊಳೆ (31) ಶಿಕ್ಷೆಗೆ ಒಳಗಾದ ಆರೋಪಿ. ಈತ ಮಲ್ಲೇಶ ಮಲ್ಲಪ್ಪ ಹೊನ್ನಾಳಿ  (30) ಎಂಬವರನ್ನು 2011ರ ಜ.9ರಂದು ಅಮಲು ಪದಾರ್ಥ ನೀಡಿ ಕಸಬ ಬೆಂಗ್ರೆ ನೆಡುತೋಪು ಕಾಡಿನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ.
ಹೊನ್ನಾಳಿಯ ಲಮ್ಮ (20) ಎಂಬಾಕೆಯನ್ನು ಮಲ್ಲೇಶ ಮದುವೆಯಾಗಿದ್ದ. ಪತಿ ಮಂಗಳೂರಲ್ಲಿ ಕೆಲಸ ಮಾಡುತ್ತಿದ್ದರೂ ಪತ್ನಿ ತವರಲ್ಲಿಯೇ ಇದ್ದಳು. ಆಗ ಮಲ್ಲಪ್ಪ ಬಸಪ್ಪ ಎಂಬಾತ ಲಮ್ಮ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಇದು ತಿಳಿದು ಲಮ್ಮನನ್ನು ಪತಿಯ ಜತೆ ಮಂಗಳೂರಿಗೆ ಕಳುಹಿಸಿದರು.
ಮಂಗಳೂರು ಕೊಟ್ಟಾರ ಚೌಕಿಯಲ್ಲಿ ದಂಪತಿ ವಾಸವಾಗಿದ್ದರು. ಮಲ್ಲಪ್ಪ ಬಸಪ್ಪ ಮಂಗಳೂರಿಗೂ ಬಂದು ಪತಿ ಮಲ್ಲೇಶ ಜತೆ ಗೆಳೆತನ ಬೆಳೆಸಿ, ಪತ್ನಿ ಜತೆ ಅಕ್ರಮ ಸಂಪರ್ಕ ಬೆಳೆಸಿದ.
ಕ್ರಮೇಣ ಅನೈತಿಕ ಸಂಬಂಧ ಮಲ್ಲೇಶನಿಗೆ ಗೊತ್ತಾಗಿ ಗಲಾಟೆಯಾಗಿತ್ತು. ಇದೇ ವಿಚಾರದಲ್ಲಿ ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement