ಮತದಾರರ ಪರಿಷ್ಕರಣ ಕೇಂದ್ರ ಪರಿಶೀಲನೆ
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಮತದಾರರ ನೋಂದಣಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಹರ್ಷಗುಪ್ತ ಯುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆಯನ್ನು, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಸ್ಟೇಟ್ ಎನ್ಹ್ಯಾನ್ಸಡ್ ಎಲೆಕ್ಟ್ರಲ್ ರೋಲ್ ಸಿಸ್ಟಂ ಮತದಾರರ ಸೇರ್ಪಡೆಗಿರುವ ವಿಶೇಷ ಸಾಫ್ಟ್ವೇರ್ ಇದಾಗಿದೆ. ಸಮಗ್ರ ಮಾಹಿತಿಯಿಲ್ಲದೆ ಫಾರ್ಮ್ 6ನ್ನು ಇದು ಸ್ವೀಕರಿಸುವುದಿಲ್ಲ. ಈ ಸಾಫ್ಟ್ವೇರ್ನ ಕಾರ್ಯವನ್ನು ಪರಿಶೀಲಿಸಿದರು. ತಾಲೂಕು ಪಂಚಾಯ್ತಿ ಕಚೇರಿಯಲ್ಲಿಯೂ ಸಿಯರ್ಸ್ ಸಾಫ್ಟ್ವೇರ್ ಅಳವಡಿಸಿದ್ದು, ಅಲ್ಲಿಗೂ ತೆರಳಿ ಪರಿಶೀಲಿಸಿದರು.