ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶೆಟ್ಟಿ, ಬಾವ ಬೆಂಬಲಿಗರ ಘರ್ಷಣೆ

Rashmi Kasaragodu
Updated On : 7 Apr 2013, 12:57 pm

ಕ.ಪ್ರ. ವಾರ್ತೆ   ಮಂಗಳೂರು   ಏ.6
ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಹೋರಾಟ ನಡೆಸುತ್ತಿರುವ ವಿಜಯಕುಮಾರ್ ಶೆಟ್ಟಿ ಮತ್ತು ಮೊಯ್ದಿನ್ ಬಾವ ಬೆಂಬಲಿಗರು ಶನಿವಾರ ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಘರ್ಷಣೆ ನಡೆಸಿದರು.
ದಕ್ಷಿಣ ಕ್ಷೇತ್ರಕ್ಕೆ ಐವನ್ ಡಿಸೋಜ ಕೈಬಿಟ್ಟು ಜಾನ್ ರಿಚರ್ಡ್ ಲೋಬೋ ಹೆಸರನ್ನು ಘೋಷಿಸಲಾಗಿದೆ. ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಇದುವರೆಗೂ ಘೋಷಣೆಯಾಗಿಲ್ಲ. ವಿಜಯಕುಮಾರ್ ಶೆಟ್ಟಿ, ಕೃಪಾ ಆಳ್ವ, ಮೊಯ್ದಿನ್ ಬಾವ ಟಿಕೆಟ್ಗೆ ಕಸರತ್ತು ನಡೆಸುತ್ತಿದ್ದಾರೆ. ನವದೆಹಲಿಯಿಂದ ಆಸ್ಕರ್ ಫೆರ್ನಾಂಡಿಸ್ ಶನಿವಾರ ರಾತ್ರಿ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ವಿಜಯಕುಮಾರ್ ಶೆಟ್ಟರು ತಮ್ಮ ಬೆಂಬಲಿಗರ ಜತೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಇದೇ ವೇಳೆಗೆ ಮೊಯ್ದಿನ್ ಬಾವ ಕಡೆಯವರು ಭಾರಿ ಸಂಖ್ಯೆಯಲ್ಲಿದ್ದರು. ಯಾರೋ ಒಬ್ಬರು ಮೊಯ್ದಿನ್ ಬಾವಗೆ ಜೈ ಎಂದರು, ಆಗ ವಿಜಯಕುಮಾರ್ ಶೆಟ್ಟಿ ಬಣದವರೂ ಶೆಟ್ಟರಿಗೆ ಜೈ ಎಂದರು. ಜೈ, ಜೈ ಎಂದ ಬಳಿಕ ಮಾತಿಗೆ ಮಾತು ಬೆಳೆದು ಕೈ, ಕೈ ಮಿಲಾಯಿಸಿದರು.
ವಿಮಾನ ನಿಲ್ದಾಣದಲ್ಲಿ ಹೊರಭಾಗದಲ್ಲಿ ಗಲಾಟೆ ನಡೆದಿದ್ದು, ಅಲ್ಲಿನ ಪೊಲೀಸರು ಗಲಾಟೆಗೆ ತಾತ್ಕಾಲಿಕ ಬ್ರೇಕ್ ಹಾಕಿದರು. ಗಲಾಟೆಯಲ್ಲಿ 4 ಮಂದಿಗೆ ಏಟು ಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement