ಇಂದು ಸಿರಿಬಾಗಿಲು ಶಾಲೆ ಸುವರ್ಣ ಮಹೋತ್ಸವ
ಸುಬ್ರಹ್ಮಣ್ಯ: ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಸಿರಿಭಾಗಿಲು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.8ರಂದು ಶಾಲಾ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸುವರ್ಣೋತ್ಸವದ ಉದ್ಘಾಟನಾ ಸಮಾರಂಭವನ್ನು ಉದ್ಯಮಿ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತ ರವಿಕಕ್ಕೆಪದವು ಉದ್ಘಾಟಿಸಲಿದ್ದಾರೆ. ನೂತನ ರಂಗಮಂದಿರವನ್ನು ಕೊಂಬಾರು ದೈವ-ದೇವರ ಸಮಿತಿಯ ಗೌರವಾಧ್ಯಕ್ಷ ಕೈಕುರೆ ಕುಶಾಲಪ್ಪ ಗೌಡ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನಂದೀಶ್ ಬಿ.ವಿ. ಶಿಕ್ಷಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ಉದ್ಯಮಿ ಯಶೋಧರ ಗೌಡ ಸಮವಸ್ತ್ರ ಬಿಡುಗಡೆಗೊಳಿಸಲಿದ್ದಾರೆ.
ಸುಬ್ರಹ್ಮಣ್ಯ ಕುಕ್ಕೆಶ್ರೀ ಜೇಸಿಸ್ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮುಚ್ಚನ್, ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯದ ಮೇಲ್ವಿಚಾರಕಿ ಯಶೋಧ, ನ್ಯಾಯವಾದಿ ಸದಾನಂದ ಪಕಳ, ಬೋಳ್ನಡ್ಕ ದುರ್ಗಾಪರಮೆಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಗೌಡ ಗುತ್ತುಮನೆ ಮುಖ್ಯ ಅತಿಥಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ನೂತನ ದ್ವಜಸ್ತಂಭ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯಕ್ರಮವನ್ನು ದ್ವಜಾರೋಹಣದ ಮೂಲಕ ಶೇಷಪ್ಪ ಗೌಡ ಅಮ್ಟೂರು ನೆರವೇರಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾವಕೃಷ್ಣ ಮಲ್ಲಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಸೋಮಶೇಖರ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿ ತುಕರಾಮ, ಡಿ.ಎಂ.ರಾಮಚಂದ್ರ ಗೌಡ ಮುಖ್ಯ ಅತಿಥಿಗಳಾಗಿದ್ದಾರೆ. ದ.ಕ.ಜಿ.ಪಂ. ಅಭಿಯಂತರ ಪ್ರಮೋದ್ ಕುಮಾರ್ ಮಣಿಬಾಂಡ ಬಹುಮಾನ ವಿತರಿಸಲಿದ್ದಾರೆ.
ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕೊನೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ತುಳು ಸಾಮಾಜಿಕ ನಾಟಕ ನೆತ್ತೆರಾ ನೀರಾ ಪ್ರದರ್ಶನಗೊಳ್ಳಲಿದೆ.